ಪುತ್ತೂರು : ಪುತ್ತಿಲ ಪರಿವಾರದ ಕಚೇರಿಗೆ ಯುವಕರ ತಂಡವೊಂದು ತಲವಾರು ಹಿಡಿದು ನುಗ್ಗಿದ ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಮುಖಂಡರು ಠಾಣೆಗೆ ಆಗಮಿಸಿದರು.

ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟಪದ ಬಳಿ ಇರುವ ಅರುಣ್ ಕುಮಾರ್ ಪುತ್ತಿಲ ರವರ ಕಚೇರಿಗೆ ಇಂದು ಮಧ್ಯಾಹ್ನ ವೇಳೆ ಯುವಕರ ತಂಡವೊಂದು ನುಗ್ಗಿದ್ದು, ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಹಿನ್ನೆಲೆ ಪುತ್ತೂರು ನಗರ ಠಾಣೆಗೆ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಹಲವರು ಠಾಣೆ ಮುಂದೆ ಜಮಾಯಿಸಿದ್ದಾರೆ.

























