ಪುತ್ತೂರು : ಪುತ್ತಿಲ ಪರಿವಾರ ಕಚೇರಿ ಮುಂಭಾಗ ತಲವಾರು ತೋರಿಸಿರುವ ಘಟನೆಗೆ ಸಂಬಂಧಿಸಿದಂತೆ ದಿನೇಶ್ ಪಂಜಿಗ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜೇತ್ ಎಂಬವರು ನೀಡಿರುವ ದೂರಿನ ಮೇರೆಗೆ ದಿನೇಶ್ ಪಂಜಿಗ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ನ.10 ರಂದು ಮಧ್ಯಾಹ್ನ ಪುತ್ತಿಲ ಕಛೇರಿ ಬಳಿ ಇದ್ದಾಗ ಹೊರಗಿನಿಂದ ಬೊಬ್ಬೆ ಕೇಳಿ ಹೊರಗಡೆ ಬಂದಾಗ ದಿನೇಶ್ ಪಂಜಿಗ ಮತ್ತು ಆತನ ಸಂಗಡಿಗರು ತಲವಾರು ತೋರಿಸಿ ಮನೀಶ್ ಎಂಬಾತನನ್ನು ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿ, ಅವ್ಯಾಚವಾಗಿ ಬೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ 108/2023, ಕಲಂ: 143, 144, 147,148,352,504, 506 ಜೊತೆಗೆ 149 ಐ.ಪಿ.ಸಿ ಮತ್ತು 25 (1B) (b) Arms ಆಕ್ಟ್ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























