ವಿಟ್ಲ : ಆತ್ಮವಿಶ್ವಾಸವೇ ಕ್ರೀಡಾಪಟುವಿಗೆ ಸ್ಪೂರ್ತಿಯಾಗುತ್ತದೆ, ಇದಕ್ಕೆ ನಿದರ್ಶನ ಜಾವೇಲಿನ್ನಲ್ಲಿ ಒಲಿಂಪಿಕ್ ಚಿನ್ನದ ಪದಕ ಬಾಚಿಕೊಂಡ ಕ್ರೀಡಾಪಟು ನೀರಜ್ ಚೋಪ್ರಾರವರಾಗಿದ್ದಾರೆ. ದೇಹಸಂಪತ್ತು ಕೂಡ ಕ್ರೀಡಾಪಟುವಿಗೆ ಭಗವಂತನ ಕೊಡುಗೆ, ನಿರಂತರ ಶ್ರಮ ಇದಕ್ಕೆ ಪೂರಕ ಎಂದು ಬ್ಯಾಂಕ್ ಆಫ್ ಬರೋಡ ಶಾಖಾಧಿಕಾರಿ, ನ್ಯಾಷನಲ್ ಲೆವೆಲ್ ವೆಯಿಟ್ ಲಿಫ್ಟ್ ನಲ್ಲಿ ಚಿನ್ನದ ಪದಕ ವಿಜೇತ ಪ್ರಕಾಶ್ ಎಸ್. ರವರು ಬಸವನ ಗುಡಿಯಲ್ಲಿರುವ ವಿಠ್ಠಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಹಸನ್ ವಿಟ್ಲ ವಹಿಸಿ, ವಿದ್ಯಾರ್ಥಿಗಳು ಸ್ಫೂರ್ತಿಯಿಂದ ಭಾಗವಹಿಸುವಂತೆ ಸಲಹೆಯಿತ್ತರು.

ಕಾರ್ಯದರ್ಶಿ ಮೋಹನ ಎ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು,ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.
ಕ್ರೀಡಾ ಜ್ಯೋತಿ, ವಿದ್ಯಾರ್ಥಿ ಪಥ ಸಂಚಲನ, ಶಿಕ್ಷಕರ ಪಥ ಸಂಚಲನ, ವಿದ್ಯಾರ್ಥಿನಿ ಅನನ್ಯ ರೈ ಯವರ ಕ್ರೀಡಾ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು. ಕ್ರೀಡಾಂಗಣ ಅಲಂಕಾರ ವಿದ್ಯಾರ್ಥಿಗಳ ಗರಿಷ್ಟ ಭಾಗವಹಿಸುವಿಕೆಗೆ ಪ್ರೆರೇಪಿಸಿತ್ತು.
ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಿಕ್ಷಕಿ ಉಷಾ ಪ್ರಕಾಶ್ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಭಾನುಪ್ರಕಾಶ್ ಮತ್ತು ಶಶಿಕಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕಿಯರಾದ ಸೀಮಾ ಮಸ್ಕರೇನಸ್ ಮತ್ತು ಪ್ರಶಾಂತಿ ಸಂಯೋಜಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.

























