ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಇದರ ವತಿಯಿಂದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವಾರು ಬಹುಮಾನಗಳೊಂದಿಗೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಪ್ರಕೃತಿ ಬಿ ಜಿ ರೈ (ಪ್ರಮೋದ್ ಕುಮಾರ್ ರೈ ಮತ್ತು ಪ್ರಭಾವತಿ ದಂಪತಿ ಪುತ್ರಿ) – ಇಂಗ್ಲೀಷ್ ಭಾಷಣ – ಪ್ರಥಮ , ಸುಪ್ರಜಾ ರಾವ್ (ಡಾ. ಪ್ರಶಾಂತ್ ರಾವ್ ಮತ್ತು ಸುಮನ.ಕೆ ದಂಪತಿ ಪುತ್ರಿ)- ಜಾನಪದ ಗೀತೆ – ಪ್ರಥಮ, ನಿಲಿಷ್ಕ ಕೆ( ದಿನೇಶ್ ನಾಯ್ಕ .ಕೆ.ಜಿ ಮತ್ತು ಸ್ಮಿತಾಶ್ರೀ.ಬಿ ದಂಪತಿ ಪುತ್ರಿ)- ಚಿತ್ರಕಲೆ – ಪ್ರಥಮ, ಕೀರ್ತನ ವರ್ಮ (ಪ್ರತಾಪ್‍ಸಿಂಹ ವರ್ಮ ಮತ್ತು ವೀಣಾ ಕುಮಾರಿ.ಕೆ ದಂಪತಿ ಪುತ್ರಿ)- ಭರತನಾಟ್ಯ –ಪ್ರಥಮ, ಎಮ್ ಶ್ರೀರಂಜಿನಿ ( ಎಮ್.ರಾಮಕೃಷ್ಣ ಮತ್ತು ಗೀತಾ ಸರಸ್ವತಿ ದಂಪತಿ ಪುತ್ರಿ) – ಛದ್ಮ ವೇಷ – ದ್ವಿತೀಯ, ಅರ್ಚನಾ ಕೆ ( ವೇಣುಗೋಪಾಲ ನಾಯಕ್ ಮತ್ತು ಕಲಾವತಿ.ಯು ದಂಪತಿ ಪುತ್ರಿ) ಚರ್ಚಾ ಸ್ಪರ್ಧೆ – ತೃತೀಯ, ತನ್ಮಯಿವಾಗ್ಲೆ ( ಸತೀಶ್ ವಾಗ್ಲೆ ಮತ್ತು ಪೂರ್ಣಿಮಾ ವಾಗ್ಲೆ ದಂಪತಿ ಪುತ್ರಿ) ಸಂಸ್ಕೃತ ಭಾಷಣ – ತೃತೀಯ ಹಾಗೂ ನಂದನ ( ಸತ್ಯನಾರಾಯಣ ಮತ್ತು ವಿನಯ ದಂಪತಿ ಪುತ್ರಿ) , ಅನನ್ಯ ನಾವಡ (ರಾಮಕೃಷ್ಣ ನಾವಡ ಮತ್ತು ಪೂರ್ಣಿಮ ದಂಪತಿ ಪುತ್ರಿ), ಸಾನ್ವಿ ಕೆ ( ಕೆ.ಹರಿಪ್ರಸಾದ್ ವೈಲಾಯ ಮತ್ತು ಸ್ವಾತಿ.ಎಚ್.ವೈಲಾಯ ದಂಪತಿ ಪುತ್ರಿ), ಧನ್ವಿ ಎ (ರಾಘವೇಂದ್ರ ಮತ್ತು ಅನಿತಾ.ಎ ದಂಪತಿ ಪುತ್ರಿ), ಕೆ. ಪ್ರಮಥೇಷ ಶರ್ಮ ( ಬಿ.ಬಾಲಸುಬ್ರಮಣ್ಯ ಮತ್ತು ಗೀತಾಲಕ್ಷ್ಮೀ ದಂಪತಿ ಪುತ್ರ), ಶ್ರೀಶಕೃಷ್ಣ ಜಿ.ಎಸ್ (ಗೋಪಾಲಕೃಷ್ಣ.ಎಂ ಮತ್ತು ಶಾರದಾಕೃಷ್ಣ ದಂಪತಿ ಪುತ್ರ) – ಕವ್ವಾಲಿ – ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

























