‘ದೀಪಾವಳಿ’ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗುವ ದಿವ್ಯ ಸಂದೇಶವನ್ನು ನೀಡುವ ಹಬ್ಬ ಹಾಗೂ ಜ್ಞಾನ ಜ್ಯೋತಿಯನ್ನು ಬೆಳಗಿಸಿ ಮನದ ಕತ್ತಲೆಯನ್ನು ಹೋಗಲಾಡಿಸುವ ಹಬ್ಬ..

ಉಪ್ಪಿನಂಗಡಿಯ ಸ್ಯಾಮ್ ಸಪ್ಲಿಮೆಂಟ್ & ಫಿಟ್ನೆಸ್ ಸಂಸ್ಥೆ ವತಿಯಿಂದ ಈ ಬಾರಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಹಿಂದೂಗಳು ಹಾಗೂ ಮುಸ್ಲಿಂಮರು ಒಟ್ಟಾಗಿ ಹಬ್ಬ ಆಚರಣೆ ಮಾಡುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು.

‘ಹಮ್ ಸಬ್ ಏಕ್ ಹೇ’ ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮವು ಹಿಂದೂಗಳು ಹಾಗೂ ಮುಸ್ಲಿಂಮರ ಐಕ್ಯತೆಗೆ ಸಾಕ್ಷಿಯಾಯಿತು.

ಎಲ್ಲರೂ ಜೊತೆಗೂಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ನಾಗರಾಜ್ ಕೋಟೆ, ಇರ್ಷಾದ್ ಯು.ಟಿ., ವಿನೀತ್ ನೆಟ್ಟಣ, ಮುಸ್ತಫಾ, ರವಿತೇಜ್ ಆಲಂಗಾರು, ಸಂದೇಶ್ ಶೆಣೈ, ಪ್ರಜಿತ್ ಆಲಂಗಾರು, ಸಿಹಾಬ್, ವಿಜಿತ್, ಪ್ರಾಣೇಶ್ ಶೆಣೈ ಸಹಿತ ಹಲವರು ಪಾಲ್ಗೊಂಡಿದ್ದರು.

























