ವಿಟ್ಲ : ಸರಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಎ) ವಿಟ್ಲ ಇದರ ವಾರ್ಷಿಕ ಕ್ರೀಡಾಕೂಟವನ್ನು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಉದ್ಘಾಟಿಸಿದರು.

ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.

ವಿಟ್ಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ, ಬಂಟ್ವಾಳ ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ಶಾರದಾ ಮತ್ತು ರವಿಶಂಕರ್ ಶಾಸ್ತ್ರಿ, ಮುಖ್ಯ ಶಿಕ್ಷಕಿಯರುಗಳಾದ ಅನ್ನಪೂರ್ಣ ಮತ್ತು ವಾರಿಜಾ, ಎಸ್ ಡಿ ಎಂ ಸಿ ಸದಸ್ಯರುಗಳಾದ ಇಸ್ಮಾಯಿಲ್, ರಾಜಶೇಖರ, ಅಶೋಕ , ಮಂಜುನಾಥ ಪೈ, ರಶ್ಮಿ ಹರೀಶ್, ದೈಹಿಕ ಶಿಕ್ಷಕರುಗಳಾದ ರಾಜೇಶ್, ವಿದ್ಯಾಶಂಕರ್ ಮತ್ತು ಶ್ವೇತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಮಕ್ಕಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚಿನ್ಮಯ್ ಸ್ವಾಗತಿಸಿ, ಮನಸ್ವಿ ವಂದಿಸಿ, ಸುಕನ್ಯಾ ನಿರೂಪಿಸಿದರು. ಸೌಜನ್ಯ ಮತ್ತು ಅನುಶ್ರಿ ಸಹಕರಿಸಿದರು.


























