ಪುತ್ತೂರು : ಮಾಜಿ ಶಾಸಕರಾದ ಸಂಜೀವ ಮಠಂದೂರು ರವರು ಹಾವು ಕಡಿತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿಚಾರ ತಿಳಿದ ತಕ್ಷಣವೇ ಶಾಸಕರಾದ ಅಶೋಕ್ ರೈ ಯವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದರು.
ಮುಂಬೈ ಪ್ರವಾಸದಲ್ಲಿರುವ ಶಾಸಕ ಅಶೋಕ್ ರೈ ಯವರು ಆಸ್ಪತ್ರೆಯಲ್ಲಿರುವ ಮಾಜಿ ಶಾಸಕರ ಪುತ್ರನ ಮೊಬೈಲ್ ಗೆ ಕರೆ ಮಾಡಿ ಮಠಂದೂರು ಜೊತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ದೇವರ ದಯೆಯಿಂದ ಶೀಘ್ರಗುಣಮುಖರಾಗಿ ಎಂದು ಸಂತೈಸಿದರು.


























