ವಿಟ್ಲ : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ವಿಟ್ಲದ ಅಡ್ಯನಡ್ಕ ಸಮೀಪ ನಡೆದಿದೆ.
ಅಡ್ಯನಡ್ಕದ ಬಾಳಕಟ್ಟ ನಿವಾಸಿ ಉದಯ ನಾಯ್ಕ (38) ಮೃತರು.

ಉದಯ ನಾಯ್ಕ ರವರು ಬಂಟ್ವಾಳದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿದ್ದು, ಕೆಲ ದಿನಗಳಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಮೃತರು ಪತ್ನಿ, ಮಕ್ಕಳು, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ.