ಅಡ್ಯನಡ್ಕ : ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ನಡೆದ “Aeternus-2023” ಸ್ಪರ್ಧೆಯಲ್ಲಿ ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಸಮಗ್ರ ಪ್ರಶಸ್ತಿಯೊಂದಿಗೆ 10,000 ರೂ. ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಬಹುಮಾನ ವಿಜೇತರ ವಿವರ
- ಪೋಸ್ಟರ್ ತಯಾರಿ : ಮೋಕ್ಷಾ ಪ್ರಥಮ ಬಹುಮಾನ
- ವೈಯಕ್ತಿಕ ನೃತ್ಯ : ಪೂಜಾಶ್ರೀ ದ್ವಿತೀಯ ಬಹುಮಾನ
- ಬೆಂಕಿ ರಹಿತ ಅಡುಗೆ : ಸಿಝಾ ಮತ್ತು ವಾಫಿಯಾ ದ್ವಿತೀಯ ಬಹುಮಾನ
- ಮಡಕೆ ಅಲಂಕಾರ : ನವ್ಯಶ್ರೀ ಪ್ರಥಮ ಬಹುಮಾನ
ಗಣಿತ ಉಪನ್ಯಾಸಕರಾದ ಗಣೇಶ್ ಕೆ.ಆರ್. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.