ಸುಳ್ಯ : ಮದ್ಯದ ನಶೆಯಲ್ಲಿ ಮಗನೊಬ್ಬ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ ಕಲ್ಪಣೆ ಎಂಬಲ್ಲಿ ಘಟನೆ ನಡೆದಿದೆ.
ದೇವಿಪ್ರಸಾದ್ ಆಚಾರ್ಯ ಕಲ್ಲಗದ್ದೆ ಎಂಬಾತ ಜಾಗದ ವಿಚಾರಕ್ಕೆ ತಕರಾರು ನಡೆದು ತಂದೆ ಮಂಜುನಾಥ ಆಚಾರಿ ಮತ್ತು ತಾಯಿ ಧರ್ಮಾವತಿ ಅವರ ಮೇಲೆ ಕತ್ತಿ ಬೀಸಿ ಗಾಯಗೊಳಿಸಿದ್ದ. ಅಂಗೈ, ಎದೆ ಮತ್ತು ತಲೆ ಭಾಗಕ್ಕೆ ಗಾಯಗೊಂಡಿದ್ದು, ಗಾಯಗೊಂಡಿರುವ ತಂದೆ-ತಾಯಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೇವಿಪ್ರಸಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.