ದಾವಣಗೆರೆ : ಶ್ವಾನವೊಂದು ತನ್ನಿಂದಾಗಿ ಸಾವನ್ನಪ್ಪಿದ ಬೈಕ್ ಸವಾರನ ಮನೆಗೆ ಬಂದು ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಶ್ವಾನವೊಂದು ಮೃತ ಬೈಕ್ ಸವಾರನ ಮನೆಗೆ ಬಂದಿದೆ.
ತಿಪ್ಪೇಶ್ ಎಂಬ 21 ವರ್ಷದ ಯುವಕ ಕಳೆದ ಗುರುವಾರದಂದು ಬೈಕ್ ಚಲಾಯಿಸುವಾಗ ಸಾವನ್ನಪ್ಪಿದ್ದನು. ನಾಯಿಯೊಂದು ಅಡ್ಡಬಂದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದನು.
ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ., ವೇಳೆ ಈ ಘಟನೆ ಸಂಭವಿಸಿತ್ತು. ಸಹೋದರಿಯನ್ನು ಬಿಟ್ಟು ವಾಪಸ್ಸು ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ಗೆ ನಾಯಿ ಅಡ್ಡಲಾಗಿ ಬಂದು ಅಪಘಾತ ನಡೆದಿತ್ತು.
ಅಪಘಾತದಲ್ಲಿ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಸಾವನ್ನಪ್ಪಿದ ಮೂರನೇ ದಿನಕ್ಕೆ ಶ್ವಾನ ಮೃತನ ಮನೆಗೆ ಆಗಮಿಸಿದೆ. ಮನೆಗೆ ಬಂದು ತಿಪ್ಪೇಶ್ ಕೊಠಡಿ, ಅಡುಗೆ ಮನೆಯನ್ನು ಸುತ್ತಾಡಿದೆ. ಮಾತ್ರವಲ್ಲದೆ, ಮೃತ ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದೆ.
ಆದರೆ ಇವೆಲ್ಲವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ. ಶ್ವಾನದ ವರ್ತನೆ ಹಾಗೂ ಮನೆಯ ಸುತ್ತ ಸುತ್ತಾಡುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ.