ಪುತ್ತೂರು : ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ, ಪುತ್ತೂರು ನಗರ ಆರಕ್ಷಕ ಉಪನಿರೀಕ್ಷಕರಾಗಿರುವ ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಡಿಸೆಂಬರ್ 3ರಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜು(ಸ್ವಾಯತ್ತ) ನಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ದೃಷ್ಟಿಯಿಂದ ಮಾದರಿ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆಯು ನಡೆಯಲಿದೆ.
ಕೆ.ಎ.ಎಸ್, ಎಫ್.ಡಿ.ಎ, ಎಸ್.ಡಿ.ಎ, ಪಿ.ಎಸ್.ಐ, ಪಿ.ಸಿ, ಪಿ.ಡಿ.ಒ, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪಿಯುಸಿ / ಪದವಿ ಓದುತ್ತಿರುವ / ಓದು ಮುಗಿಸಿರುವ 40 ವರ್ಷದ ವರೆಗಿನ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಮೊದಲು ನೋಂದಣಿ ಮಾಡಿದ 1000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಋಣಾತ್ಮಕ ಅಂಕಗಳನ್ನು ಪರಿಗಣಿಸಲಾಗುತ್ತದೆ. 100 ಅಂಕಗಳ ಪ್ರಶ್ನೆ ಪತ್ರಿಕೆ ಇದಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.
ಕಾಲಾವಕಾಶ 90 ನಿಮಿಷ (ಬೆಳಿಗ್ಗೆ 11:00 ರಿಂದ 12:30).
ಭಾಗವಹಿಸುವ ಅಭ್ಯರ್ಥಿಗಳು ಬೆಳಿಗ್ಗೆ 10:00 ರ ಒಳಗಾಗಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರತಕ್ಕದ್ದು. ನಂತರ ಬಂದವರಿಗೆ ಅವಕಾಶವಿಲ್ಲ. ಪರೀಕ್ಷಾ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರುತ್ತದೆ. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ನೋಂದಣಿಗಾಗಿ ವಿದ್ಯಾಮಾತಾದ ಪುತ್ತೂರು / ಸುಳ್ಯ ಕಛೇರಿಗೆ 26 ನವೆಂಬರ್ 2023ರ ಒಳಗಾಗಿ ಭೇಟಿ ನೀಡಬಹುದು. ಇಲ್ಲವೇ ಇಲ್ಲಿ ನೀಡಿರುವ QR ಕೋಡ್ ಬಳಸಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ,ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಫೋನ್ ನಂ. : 9148935808 / 9620468869
ಸುಳ್ಯ ಶಾಖೆ :
ವಿದ್ಯಾಮಾತಾ ಅಕಾಡೆಮಿ
ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239.,
9448527606 ನ್ನು ಸಂಪರ್ಕಿಸಬಹುದು.
