ಮಂಗಳೂರು : ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ರೂಂನ ಬೆಡ್ಗೆ ಬೆಂಕಿ ತಗುಲಿದ್ದು, ಬೆಡ್ ಮೇಲೆ ಮಲಗಿದ್ದವನು ಜೀವಂತ ದಹನವಾದ ಘಟನೆ ಬೆಳಕಿಗೆ ಬಂದಿದೆ.
ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಮೃತರು.
ಯಶ್ ರಾಜ್ ನವೆಂಬರ್ 15 ರಿಂದ ಹೋಟೆಲ್ನಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ರೂಂಗೆ ಹೋಗಿದ್ದರು. ರಾತ್ರಿ ರೂಂನಿಂದ ಹೊಗೆ ಕಾಣಿಸಿಕೊಂಡಿದೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸೋ ಕಾರ್ಯ ಮಾಡಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.


























