ಬೆಂಗಳೂರು : ಡಿಸಿಪಿ ಕಚೇರಿ ಎದುರು ಯುವತಿ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿ ಯಾರೆಂದು ಪೊಲೀಸರು ಪತ್ತೆ ಹಚ್ಚಿ, ಅರೆಸ್ಟ್ ಮಾಡಿದ್ದಾರೆ.
ಬಿನ್ನಿಪೇಟೆಯ ಹರೀಶ್ (22) ಬಂಧಿತ ಆರೋಪಿ.
ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂದೆ ಇದೇ ತಿಂಗಳ 6 ರಂದು ರಾತ್ರಿ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ಯುವತಿಯನ್ನು ಚುಡಾಯಿಸಿದ್ದನು. ಆಕೆಯ ಬಟ್ಟೆ ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿ ಎಸ್ಕೇಪ್ ಆಗಿದ್ದನು. ಈ ಘಟನೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದ ಜಯನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಬರೋಬ್ಬರಿ 500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ.
ಯುವತಿಯನ್ನು ಚುಡಾಯಿಸಿದ್ದ ಹರೀಶ್ ಎನ್ನುವ ಯುವಕನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೃತ್ಯ ಎಸಗಿದ್ದ ಯುವಕ ತನ್ನ ಮೇಲೆ ಕೇಸ್ ದಾಖಲಾಗಿರುವ ಬಗ್ಗೆ ಅರಿವಿಲ್ಲದೇ, ಏನು ಆಗಿಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದನು. ಸಿಸಿಟಿವಿಗಳ ಬೆನ್ನತ್ತಿ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಈ ವೇಳೆ ತಪ್ಪಾಯಿತು ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.

























