ಉಪ್ಪಿನಂಗಡಿ : ವಾಹನ ಚಾಲನೆ ವಿಚಾರದಲ್ಲಿ ತಕರಾರು ತೆಗೆದು ಆಟೋ ಚಾಲಕರೋರ್ವರಿಗೆ ದ್ವಿಚಕ್ರ ವಾಹನ ಸವಾರ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಇಚ್ಲಂಪಾಡಿ ನಿವಾಸಿ, ಆಟೋ ಚಾಲಕ ಕೇಶವ ಎಂಬವರು ನೀಡಿದ ದೂರಿನ ಮೇರೆಗೆ ಸನೋಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಶವ (43) ಎಂಬವರು ನ.1 ರಂದು ಸಂಜೆ ಬಾಡಿಗೆಯ ನಿಮಿತ್ತ, ಅವರ ಆಟೋರಿಕ್ಷಾದಲ್ಲಿ ಶಬರೀಶ ಮತ್ತು ಕೇಶವ ಎಂಬವರನ್ನು ಕರೆದುಕೊಂಡು ಕಡಬ ತಾಲೂಕು ಇಚ್ಲಂಪಾಡಿ ಲಾವತಡ್ಕದ ರುದ್ರಮಜಲು ಎಂಬಲ್ಲಿ ತಲುಪಿದಾಗ, ಸನೋಜ್ ಎಂಬಾತನು ದ್ವಿ ಚಕ್ರ ವಾಹನವೊಂದರಲ್ಲಿ ಬಂದು ಕೇಶವರನ್ನು ಉದ್ದೇಶಿಸಿ, ವಾಹನ ಚಾಲನೆಯ ವಿಚಾರವಾಗಿ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಕೈಯಿಂದ ಮುಖಕ್ಕೆ ಗುದ್ದಿ ದೂಡಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 161/2023 ಕಲಂ: ಕಲಂ: 504, 323 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























