ಪುತ್ತೂರು : ಶ್ರೀರಾಮ ಗೆಳೆಯರ ಬಳಗ (ರಿ )ಪುತ್ತಿಲ ಮತ್ತು ಪುತ್ತಿಲ ಪರಿವಾರ ಮುಂಡೂರು ಇದರ ಜಂಟಿ ಆಶ್ರಯದಲ್ಲಿ ದ್ವಿತೀಯ ವರ್ಷದ ಅರ್ಧ ಏಕಹಾ ಭಜನೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಹಾಗೂ ಸುಧರ್ಮ ಸಭೆ ಜ.6 ರಂದು ಶನಿವಾರ ಶ್ರೀರಾಮ ಕ್ರೀಡಾಂಗಣ ಪುತ್ತಿಲದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ನ.26 ರಂದು ಪುತ್ತಿಲ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನಡೆಯಿತು.

ಶ್ರೀರಾಮ ಗೆಳೆಯರ ಬಳಗದ ಗೌರವಧ್ಯಕ್ಷರು, ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ಅನಿಲ್ ಕುಮಾರ್ ಕಣ್ಣರ್ನೂಜಿ, ಪ್ರಾ. ಕಾರ್ಯದರ್ಶಿ ಬಾಲಚಂದ್ರ ಸೊರಕೆ, ಕೋಶಾಧಿಕಾರಿ ಬಾಲಚಂದ್ರ ಗೌಡ ಕಡ್ಯ,ಸಂಚಾಲಕರು ನೀಲಪ್ಪ ಪೂಜಾರಿ ಕುರೆಮಜಲು, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲು, ಪುಷ್ಪ ಪುರಂದರ ನಡುಬೈಲು, ಅರುಣಾ ಅನಿಲ್ ಕಣ್ಣರ್ನೂಜಿ, ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಸಾದ್ ಬಿ. ಕೆ, ಕಾರ್ಯದರ್ಶಿ ಯೋಗೀಶ್ ಕಲ್ಲಮ, ಮುಂಡೂರು ಬೂತ್ ಸಮಿತಿ ಅಧ್ಯಕ್ಷರು ಸೇಸಪ್ಪ ಶೆಟ್ಟಿ ಪೋನೋನಿ, ಮತ್ತು ಕುಶಾಲಪ್ಪ ಗೌಡ ಕಡ್ಯ, ಬೂತ್ ಸಮಿತಿ ಕಾರ್ಯದರ್ಶಿ ಅಶೋಕ್ ನಾಯ್ಕಪುತ್ತಿಲ, ಸಂತೋಷ್ ಶೆಟ್ಟಿ ಪಂಜಲ, ಸಂತೋಷ್ ತೌಡಿಂಜ. ಮತ್ತು ಪೂಜಾ ಸಮಿತಿಯ ಪದಾಧಿಕಾರಿಗಳಾದ ಸುಂದರ ಗೌಡ ನಡುಬೈಲು, ಹರೀಶ ಬಿ. ಕೆ, ಪುರಂದರ ಗೌಡ ನಡುಬೈಲು, ಸುಂದರ ನಾಯ್ಕ ಬಿ. ಕೆ, ಚಂದ್ರಶೇಖರ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ ವಿಶ್ವನಾಥ ಗೌಡ ಕರೆಮನೆ, ಸಜ್ಜನ್ ಕುಮಾರ್ ಕಣ್ಣಾರ್ನೂಜಿ, ಗಣೇಶ್ ನಾಯ್ಕಕೊಡಿಬೈಲ್, ಬಾಲಕೃಷ್ಣ ಶೆಟ್ಟಿ ಪಂಜಳ ಜಗದೀಶ್ ಕಲ್ಲಮ, ರಾಧಾಕೃಷ್ಣ ಪುತ್ತಿಲ, ವಿನಯಚಂದ್ರ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಅಭಿಷೇಕ್ ಕಲ್ಲಮ, ಮನೀಶ್ ಕರಮನೆ ಕಟ್ಟೆ, ಧನಂಜಯ ಕಲ್ಲಮ ಜನಾರ್ಧನ ಕುರೆಮಜಲು, ನಾರಾಯಣ ನಾಯ್ಕ ಪುಳಿಕೇತಡಿ, ನಿಶಾಂತ್ ಕುರೆಮಜಲು, ಬಾಲಕೃಷ್ಣ ಶೆಟ್ಟಿ ಪಟ್ಟೆ, ನಿತಿನ್ ಶೆಟ್ಟಿ ಮುಂಡೂರು, ವಿನೋದ್ ಶೆಟ್ಟಿ ಪಂಜಲ ಉಪಸ್ಥಿತರಿದ್ದರು.



























