ಪುತ್ತೂರು : ಆಟೋ ಚಾಲಕನೋರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.23 ರಂದು ರಾತ್ರಿ ಮಹಿಳೆ ಕೆಲಸ ಮುಗಿಸಿ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬಂದು, ಪುತ್ತೂರಿನಲ್ಲಿರುವ ತನ್ನ ಮನೆಗೆ ಆಟೋ ರಿಕ್ಷಾವೊಂದರಲ್ಲಿ ತೆರಳಿದ್ದು, ಮನೆ ಹತ್ತಿರ ತಲುಪಿದಾಗ ಆಟೋವನ್ನು ನಿಲ್ಲಿಸುವಂತೆ ಹೇಳಿ ಬಾಡಿಗೆ ಹಣವನ್ನು ನೀಡಿದಾಗ ಆಟೋ ಚಾಲಕನು ಏಕಾಏಕಿ ಅನುಚಿತವಾಗಿ ವರ್ತಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 341, 354 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.