ಪುತ್ತೂರು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನ.27ರಂದು ನಡೆದ ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ ಮತ್ತು ಕುರಿಂದು ಉತ್ಸವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗಿಯಾದರು.
ದೇವಳದಲ್ಲಿ ರಾತ್ರಿ ಪೂಜೆಯ ಬಳಿಕ ಶ್ರೀ ದೇವರ ಪೇಟೆ ಸವಾರಿ ಉತ್ಸವದ ಸಂದರ್ಭ ಅವರು ಜೊತೆಯಾಗಿ, ನೆಲ್ಲಿಕಟ್ಟೆಯಲ್ಲಿ ನಡೆದ ಕಟ್ಟೆಪೂಜೆಯ ತನಕ ಶ್ರೀದೇವರ ಉತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.
ದೇಶದ ಕೀರ್ತಿಯನ್ನು ಹೆಚ್ಚಿಸುವ ಶಕ್ತಿ ಕೊಡಲಿ., ಇವರಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಲ್ಲಿ ಎಲ್ಲಾ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಕಾರ್ಯ ನಡೆಯಲಿ ಎಂದು ಅರ್ಚಕರು ದೇವರ ಮುಂದೆ ಪ್ರಾರ್ಥನೆ ಮಾಡಿ ಸಂಸದರಿಗೆ ಪ್ರಸಾದ ವಿತರಿಸಿದರು.
ದೇವಳದ ಪ್ರಧಾನ ಅರ್ಚಕ ವೇ.ಮೂ. ದಿವಾಕರ ಭಟ್ ಸಂಕಲ್ಪ ನೆರವೇರಿಸಿ ಪ್ರಾರ್ಥಿಸಿದರು. ದೇವಳದ ಆಡಳಿತ ಮೊಕ್ತೇಸರ ಡಾ. ಅಶೋಕ್ ಪ್ರಭು ಸಂಸದರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭ ಭಕ್ತರು ಉಪಸ್ಥಿತರಿದ್ದರು.