ಪುತ್ತೂರು : 2022-23ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ರಾಜ್ಯ ಪುರಸ್ಕಾರ ಸ್ಕೌಟ್ಸ್ ಪರೀಕ್ಷಾ ಶಿಬಿರದಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.
10ನೇ ತರಗತಿ ವಿದ್ಯಾರ್ಥಿಗಳಾದ ಕೌಶಿಕ್ .ಕೆ (ಕುಶಾಲಪ್ಪ ಗೌಡ ಮತ್ತು ಸುಮತಿ ದಂಪತಿ ಪುತ್ರ), ಶ್ರವಣ ಶ್ಯಾಮ.ಕೆ.ಎನ್ (ನರಸಿಂಹ ಭಟ್ ಮತ್ತು ಪ್ರೇಮಲತಾ ದಂಪತಿ ಪುತ್ರ), ಪ್ರಜ್ವಲ್ ಎಚ್.ಎಚ್ (ಹರೀಶ ಮತ್ತು ವಾರಿಜಾ ದಂಪತಿ ಪುತ್ರ), ಕೆ. ಅಕ್ಷಯ್ ಬೋರ್ಕರ್ (ಕೆ. ಜಯಪ್ರಕಾಶ್ ಬೋರ್ಕರ್ ಮತ್ತು ಹೇಮಾಮಾಲಿನಿ ದಂಪತಿ ಪುತ್ರ), ಸನ್ಮಿತ್ ಎಸ್. ರೈ (ಸಂತೋಷ್ ರೈ ಮತ್ತು ಗೀತಾ ಎಸ್.ರೈ ದಂಪತಿ ಪುತ್ರ), ರಚನ್.ಜಿ.ಸಿ (ಚಂದ್ರಶೇಖರ್.ಜಿ.ಎ ಮತ್ತು ನಳಿನಿ.ಜಿ.ಸಿ ದಂಪತಿ ಪುತ್ರ), ರಕ್ಷಿತ್.ಪಿ.ಕೆ (ಪಿ.ಕೃಷ್ಣಪ್ಪ ಗೌಡ ಮತ್ತು ಪುಷ್ಪಾ ದಂಪತಿ ಪುತ್ರ), ಸಿಂಚನ್.ಸಿ.ರೈ (ಚಿದಾನಂದ ರೈ .ಇ.ಕೆ ಮತ್ತು ಸಂದ್ಯಾಕುಮಾರಿ .ಒ ದಂಪತಿ ಪುತ್ರ), ಅಕ್ಷಯ್ .ಕೆ (ಕೆ.ನೀಲಯ್ಯ ಗೌಡ ಮತ್ತು ಕೆ.ಚೇತನಾ ದಂಪತಿ ಪುತ್ರ), ಸೂರಜ್ ಶೆಟ್ಟಿ (ನಾರಾಯಣ ಶೆಟ್ಟಿ ಮತ್ತು ಸುಲೋಚನಾ ದಂಪತಿ ಪುತ್ರ), 9ನೇ ತರಗತಿ ವಿದ್ಯಾರ್ಥಿ ಶ್ರೀನಿತ್ (ದೇವಪ್ಪ ನಾಯ್ಕ ಮತ್ತು ಯಶೋಧ ದಂಪತಿ ಪುತ್ರ) ರವರು ಉತ್ತೀರ್ಣರಾಗಿರುತ್ತಾರೆ.
ಸಂಸ್ಥೆಯ ಸ್ಕೌಟ್ ಮಾಸ್ಟರ್ ಶ ಮುರಳಿಕೃಷ್ಣ.ಪಿ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಮಾಲ ವಿ.ಎನ್. ತಿಳಿಸಿರುತ್ತಾರೆ.