ಪುತ್ತೂರು : ಅಯ್ಯಪ್ಪ ದೀಪೋತ್ಸವ ಡಿ. 27 ರಂದು ನಡೆಯಲಿದ್ದು, ಈ ಹಿನ್ನೆಲೆ ಅಯ್ಯಪ್ಪ ದೀಪೋತ್ಸವ ಸಾರ್ವಜನಿಕ ಆಚರಣಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಕಚೇರಿಯ ಬಳಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಅಧ್ಯಕ್ಷರಾಗಿ ಸಂಜೀವ ಮಠಂದೂರು, ಕಾರ್ಯಾಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಸಂಚಾಲಕರಾಗಿ ಮುರಳಿಕೃಷ್ಣ ಹಸಂತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಗೌಡ ನಂದಿಲ, ಮನೋಜ್ ಚಿಕ್ಕಪುತ್ತೂರು ರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಮನ್ಮಥ ಶೆಟ್ಟಿ, ಉಪಾಧ್ಯಕ್ಷರಾಗಿ ರಾಮಣ್ಣಗುರುಸ್ವಾಮಿ, ಸತೀಶ್ ನಾಯಕ್ ಮತ್ತು ದೇವನಂದ ಮತ್ತು ಸ್ವಾಗತ ಸಮಿತಿಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾದ ಶೇಖರ್ ನಾರವಿ, ಐತಪ್ಪ ನಾಯ್ಕ, ರವಿಂದ್ರ ರೈ, ರಾಮದಾಸ್, ರಾಮಚಂದ್ರ ಕಾಮತ್ ಹಾಗೂ ಪುತ್ತೂರು ತಾಲೂಕಿನಾದ್ಯಂತ ಇರುವ ಅಯ್ಯಪ್ಪ ಗುರುಸ್ವಾಮಿಗಳನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ, ಖಜಾಂಚಿಯಾಗಿ ದಿನೇಶ್ ಕುಮಾರ್ ಜೈನರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಸಿಬ್ಬಂದಿಗಳಾದ ಇಒ ಮತ್ತು ಹರೀಶ್ ಉಪಸ್ಥಿತರಿದ್ದರು.