ಕಾಪು: ನೌಕೆ ಚಂಡಮಾರುತ ಪರಿಣಾಮ ಸಮುದ್ರದ ಬಂಡೆಗಳ ನಡುವೆ ಸಿಲುಕಿದ್ದ ಕಚ್ಚಾ ತೈಲ ಹೊತ್ತಿರುವ ಟಗ್ ನಲ್ಲಿ 9 ಜನ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸಿದ್ದರು. ಈ ಎಲ್ಲ ಕಾರ್ಮಿಕರ
ರಕ್ಷಣೆಗಾಗಿ ಸತತ ಕಾರ್ಯಾಚರಣೆ ನಡೆಸಿದ್ದ ಕೋಸ್ಟಲ್ ಗಾರ್ಡ್ ಪಡೆ 9 ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಹೆಲಿಕಾಪ್ಟರ್ ಮೂಲಕ ಟಗ್ ಇರುವ ಸ್ಥಳಕ್ಕೆ ತೆರಳಿದ್ದ ಕೋಸ್ಟಲ್ ಗಾರ್ಡ್ ಸಿಬ್ಬಂದಿ ಟಗ್ ನಲ್ಲಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಎನ್‌ಎಂಪಿಟಿ ಬಂದರಿನ ಹೊರವಲಯದಲ್ಲಿ ಈ ಟಗ್ ಕರ್ತವ್ಯ ನಿರ್ವಹಿಸುತ್ತಿದ್ದು ಚಂಡಮಾರುತದ ಪರಿಣಾಮ ಆ್ಯಂಕರ್ ತುಂಡಾಗಿ ತೇಲುತ್ತಾ ಬಂದು ಉಡುಪಿ ಜಿಲ್ಲೆಯ ಕಾಪು ಬಳಿಯಲ್ಲಿ ಅಪಘಾತಕ್ಕೊಳಗಾಗಿತ್ತು. ಕೋರಮಂಡಲ ಎಕ್ಸ್ ಪ್ರೆಸ್ ಟಗ್ ನ 9 ಮಂದಿ ಸಿಬ್ಬಂದಿಗಳು ನಲ್ವತ್ತು
ಗಂಟೆಗಳಿಂದ ರಕ್ಷಣೆಯ ನಿರೀಕ್ಷೆಯಲ್ಲಿ ಸಮುದ್ರದಲ್ಲೇ ಬಾಕಿಯುಳಿದಿದ್ದರು.