ಮಂಗಳೂರು: ಕೊರೊನಾ ಮಧ್ಯೆಯೇ ಕಾಣಿಸಿಕೊಂಡ ಬ್ಲಾಕ್ ಫಂಗಸ್ ಕಾಟ ಇದೀಗ ಮಂಗಳೂರಿನಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ದ.ಕ. ಜಿಲ್ಲೆಯಲ್ಲಿ ಭಾನುವಾರ ಇಬ್ಬರು ರೋಗಿಗಳಲ್ಲಿ ಬ್ಲಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದ್ದು, ಆದರೆ ಇದು ಇನ್ನು ದೃಢಪಟ್ಟಿಲ್ಲ.
ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಬ್ಲಾಕ್ ಫಂಗಸ್ ಲಕ್ಷಣ ಇರುವ ರೋಗಿಗಳು ಕಂಡುಬಂದಲ್ಲಿ ಅವರ ಮಾಹಿತಿ ನೀಡಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಕಿಶೋರ್‌ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬ್ಲಾಕ್ ಫಂಗಸ್ ತಗುಲಿದವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು, ಅಲ್ಲದೆ ಮೂರ್ನಾಲ್ಕು ದಿನದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು. ಈ ಸಮಿತಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಲಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೂ ಇದಕ್ಕೆ ಬೇಕಾಗಿರುವ ಆಂಪೊಟೆರಿಸಿನ್ ಔಷಧವನ್ನು ನೀಡಲಿದ್ದು ೨೦ ಸಾವಿರ
ಡೋಸ್‌ಗೆ ಮನವಿ ಮಾಡಲಾಗಿದೆ. ಬ್ಲಾಕ್ ಫಂಗಸ್‌ಗೆ ೭ ವಾರಗಳ ಚಿಕಿತ್ಸೆ ನೀಡಬೇಕಾಗಿದ್ದು, ಇದಕ್ಕೆ ೨೦ರಿಂದ ೩ ಲಕ್ಷ ರೂ. ಖರ್ಚಾಗುತ್ತದೆ. ಇದನ್ನು ಉಚಿತವಾಗಿ ನೀಡಲು ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಆರೋಗ್ಯ
ಸಚಿವ ಸುಧಾಕರ್ ತಿಳಿಸಿದ್ದಾರೆ.