ವಿಟ್ಲ : ಬಂಟರ ಸಂಘ ಕೇಪು ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಕೇಪು ಶ್ರೀ ಸುಬ್ರಾಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಬೆಳಿಗ್ಗೆ ಅರ್ಚಕರಾದ ಶ್ರೀ ಸೂರ್ಯನಾರಾಯಣ ಕೇಕುಣ್ಣಾಯರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ಸಂಪನ್ನಗೊಂಡಿತು. ಮಧ್ಯಾಹ್ನ ಕೇಪು ಬಂಟರ ಸಂಘದ ಅಧ್ಯಕ್ಷರಾದ ಜಗಜ್ಜೀವನ್ ರಾಮ್ ಶೆಟ್ಟಿ ಬೇಡೆಮಾರ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವು ನಡೆಯಿತು. ಹಿತೈಷಿ ಶೆಟ್ಟಿ ಕುಕ್ಕೆಬೆಟ್ಟು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಅತಿಥಿಗಳಾಗಿ ಉದ್ಯಮಿಗಳಾದ ಗುಬ್ಯ ಶ್ರೀಧರ ಶೆಟ್ಟಿ ಮೇಗಿನಗುತ್ತು, ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ ರೈ ಕುಂಡಕೋಳಿ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಸಂಘದ ಕಾರ್ಯದರ್ಶಿಗಳಾದ ಸತೀಶ್ ರೈ ಪಡ್ಡಂಬೈಲುಗುತ್ತು- ಮೈರ, ಕೇಪು ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಮಮತಾ ಆರ್. ಭಂಡಾರಿ ಉಪಸ್ಥಿತರಿದ್ದರು.

ಸಂಘದ ಕೋಶಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಮೈರ ವಾರ್ಷಿಕ ವರದಿ ಮಂಡಿಸಿದರು.

ಮುಖ್ಯ ಅತಿಥಿಗಳಾದ ಗುಬ್ಯ ಶ್ರೀಧರ ಶೆಟ್ಟಿ ಮೇಗಿನಗುತ್ತು ಮಾತನಾಡಿ, ಗ್ರಾಮ ಸಮಿತಿಗಳು ಸಕ್ರೀಯವಾಗಿದ್ದಾಗ ಸಮಾಜದ ಬೆಳವಣಿಗೆ ಸಾಧ್ಯ ಎಂದರು. ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಉದಯಕುಮಾರ್ ರೈ ಕಂಬಳದಡ್ಡ ವಂದಿಸಿದರು. ರಾಜೀವ ಭಂಡಾರಿ ಕುಂಡಕೋಳಿ ನಿರೂಪಿಸಿದರು.





























