ಪುತ್ತೂರು : ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ವಕೀಲರ ಸಂಘದ ನೇತೃತ್ವದಲ್ಲಿ ಖಂಡನಾ ಸಭೆ, ಪ್ರತಿಭಟನೆ ನಡೆಯಿತು.

ಪುತ್ತೂರು ವಕೀಲರ ಸಂಘದ ನೇತೃತ್ವದಲ್ಲಿ ಸದಸ್ಯರುಗಳು ಕೋರ್ಟ್ ಆವರಣದಲ್ಲಿ ಖಂಡನಾ ಸಭೆ ನಡೆಸಿ, ಬಳಿಕ ಕೋರ್ಟ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು.



























