ಬೆಂಗಳೂರು : ಗರ್ಲ್ಫ್ರೆಂಡ್ನ ಇಂಪ್ರೆಸ್ ಮಾಡಲು ಸುಲಿಗೆ ಮಾಡ್ತಿದ್ದ ಇಬ್ಬರು ಯುವಕರು ಜೈಲು ಪಾಲಾದ ಘಟನೆ ಮುನ್ನಲೆಗೆ ಬಂದಿದೆ.
ಉಸ್ಮಾನ್ ಮತ್ತು ಸೂರ್ಯ ಇದೀಗ ಪೊಲೀಸರ ಅಥಿತಿಗಳಾಗಿದ್ದಾರೆ.
ಉಸ್ಮಾನ್ ಮತ್ತು ಸೂರ್ಯ ಇಬ್ಬರಿಗೂ ಗರ್ಲ್ ಫ್ರೆಂಡ್ ಇದ್ದು, ಪ್ರೀತಿಸುತ್ತಿದ್ದವರನ್ನು ಖುಷಿ ಪಡಿಸುವ ಉದ್ದೇಶದಿಂದ ಸುಲಿಗೆ ಮಾಡುತ್ತಿದ್ದರು. ಆರೋಪಿಗಳು ಬೆಂಗಳೂರಿನ ಹಲವೆಡೆ ಸುಲಿಗೆಗೆ ಇಳಿದ್ದಿದ್ದರು.
ಆರೋಪಿಗಳಿಬ್ಬರು ಪುಲಿಕೇಶಿನಗರ, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಸುಲಿಮಾಡುತ್ತಿದ್ದರು. ಒಂಟಿಯಾಗಿ ಓಡಾಡುವವರು, ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡುತ್ತಿದ್ದರು.
2 ತಿಂಗಳ ಹಿಂದೆ ಡೆಲಿವರಿ ಬಾಯ್ಗೆ ಬೆದರಿಸಿ ಉಸ್ಮಾನ್ ಸುಲಿಗೆ ಮಾಡಿದ್ದನು. ಈ ವೇಳೆ ಆರೋಪಿ ಮೊಬೈಲ್, ನಗದು ದೋಚಿದ್ದನು. ಬಳಿಕ ಮೊಬೈಲ್ ಅನ್ನು ಗರ್ಲ್ ಫ್ರೆಂಡ್ಗೆ ಗಿಫ್ಟ್ ಮಾಡಿದ್ದನು. ಆರಂಭದಲ್ಲಿ ಹುಡುಗಿಯೇ ಕಳ್ಳಿ ಎಂದು ಭಾವಿಸಿದ್ದ ಪೊಲೀಸರು. ವಿಚಾರಣೆ ವೇಳೆ ಬಾಯ್ ಫ್ರೆಂಡ್ ಗಿಫ್ಟ್ ಕೊಟ್ಟ ವಿಷ್ಯ ಬಯಲಿಗೆ ಬಂದಿದೆ.
ಪ್ರಿಯತಮೆಗೆ ತನ್ನ ಪ್ರಿಯತಮ ಆರೋಪಿ ಅನ್ನೋದು ತಿಳಿದಿರಲಿಲ್ಲ. ಉಸ್ಮಾನ್ ವಿಚಾರಣೆ ನಡೆಸಿದಾಗ ಉಳಿದವರ ವಿಷಯವೂ ಬಹಿರಂಗವಾಗಿದೆ. ಉಸ್ಮಾನ್ ಪಾಷಾ, ಇರ್ಫಾನ್ ಜೀವ, ಸೂರ್ಯ ಎಂಬಾತನ ಇದೇ ವಿಚಾರಕ್ಕೆ ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು 1.5 ಲಕ್ಷ ವಶಕ್ಕೆ ಪಡೆದಿದ್ದಾರೆ.

























