ಮುಕ್ಕೂರು : ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಡಿ.16 ರಂದು ಸಂಜೆ 6.30 ರಿಂದ ಕೊರಗಜ್ಜನಿಗೆ ಹರಕೆ ನೇಮ ನಡೆಯಲಿದೆ.
ಬೆಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಜಯಪ್ರಕಾಶ್ ರೈ ಕನ್ನೆಜಾಲು ಮತ್ತು ಮನೆಯವರ ಪರವಾಗಿ ಈ ಹರಕೆ ನೇಮ ನಡೆಯಲಿದೆ.
ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ 8.30 ಯಿಂದ ಬದಿಯಡ್ಕ ಕುಂಟಾಲುಮೂಲೆ ಚಿರಂಜೀವಿ ಯಕ್ಷಗಾನ ಕಲಾ ಸಂಘದ ವತಿಯಿಂದ ಯಕ್ಷಗಾನ ಬಯಲಾಟ- ಸತ್ಯೂದ ಅಜ್ಜೆ ಪ್ರದರ್ಶನಗೊಳ್ಳಲಿದೆ ಎಂದು ಜೀರ್ಣೋದ್ಧಾರ ಮತ್ತು ಆಡಳಿತ ಸಮಿತಿ ತಿಳಿಸಿದೆ.

























