ಸುಬ್ರಹ್ಮಣ್ಯ : ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ರಿ., ರವಿ ಕಕ್ಕೆಪದವು ಅನಾಥರಕ್ಷಣೆ ಸೇವಾ ಆಶ್ರಮದ ಆಶ್ರಯದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ‘ಅರ್ಜುನ ಟ್ರೋಫಿ’ ಫೆಬ್ರವರಿ.4 ರಂದು ನಡೆಯಲಿದೆ.
ಸುಬ್ರಹ್ಮಣ್ಯೇಶ್ವರ ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾಟ ಜರುಗಲಿದೆ.
ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 30,000 ರೂ., ತೃತೀಯ ಬಹುಮಾನ 20,000 ರೂ., ಚತುರ್ಥ ಬಹುಮಾನ 20,000 ರೂ. ದೊರಕಲಿದೆ.
ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಅನಾಥಶ್ರಮ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದ ಅರ್ಜುನ ಕಬಡ್ಡಿ ಪಂದ್ಯಾವಳಿ ಆಡಿಸುತ್ತಿದ್ದು, ದಾನಿಗಳು ಸಹಕಾರ ನೀಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


























