ಬೆಂಗಳೂರು : ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ NCRB ವರದಿಯಲ್ಲಿ ಮಾಡಿದೆ. ವರದಿಯಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಆ್ಯಸಿಡ್ ದಾಳಿ ಕೇಸ್ ದಾಖಲಾಗಿರೋದು ಎಂದು ತಿಳಿಸಿದೆ.
2022ರಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಆ್ಯಸಿಡ್ ದಾಳಿ ನಡೆದಿದೆ. ದೇಶದ 19 ನಗರಗಳಲ್ಲಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಆ್ಯಸಿಡ್ ದಾಳಿ ಕೇಸ್ ದಾಖಲಾಗಿವೆ.
2022ರಲ್ಲಿ 8 ಆ್ಯಸಿಡ್ ಕೇಸ್ ಗಳು ದಾಖಲಾಗಿದ್ದವು. ಇನ್ನು ದೆಹಲಿ 2ನೇ ಸ್ಥಾನದಲ್ಲಿದ್ದು 7 ಕೇಸ್ ಗಳು ದಾಖಲಾಗಿವೆ.
ಗುಜರಾತ್ ನ ಅಹಮದಾಬಾದ್ 5 ಕೇಸ್ ಗಳಿಂದ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಯತ್ನ ಕೇಸ್ಗಳೂ ಸಹ ದಾಖಲಾಗಿವೆ. ಅದರಲ್ಲಿ ದೆಹಲಿಯಲ್ಲಿ 7, ಬೆಂಗಳೂರಿನಲ್ಲಿ 3, ಅಹಮದಾಬಾದ್ ನಲ್ಲಿ 2, ಹೈದರಾಬಾದ್ ನಲ್ಲಿ 2 ಕೇಸ್ ಗಳು ದಾಖಲಾಗಿವೆ.


























