ಪುತ್ತೂರು : ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.16 ರಿಂದ 19ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವಕ್ಕೆ ಡಿ.11 ರಂದು ಗೊನೆ ಮುಹೂರ್ತ ನೆರವೇರಿತು.

ಅರ್ಚಕ ಯೋಗೀಶ ಭಟ್ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ನಾಗೇಶ್ ತಂತ್ರಿಯವರ ತೋಟದಲ್ಲಿ ಗೊನೆ ಕಡಿಯಲಾಯಿತು.
ಹಿರಿಯರಾದ ಸದಾಶಿವ ಮೊಡಂಬಡಿತ್ತಾಯ ಗೊನೆ ಮುಹೂರ್ತ ನೆರವೇರಿಸಿದರು.
ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ಸುಲೋಚನ ಪಿ.ಕೆ, ಉತ್ಸವ ಸಮಿತಿ ಅಧ್ಯಕ್ಷ ತಂತ್ರಿ ಕೆ.ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸಂಚಾಲಕ ದಯಾನಂದ ಎಂ., ಸದಸ್ಯರಾದ ಗಣೇಶ ನೈತ್ತಾಡಿ, ಗಣೇಶ ದೇವಾಡಿಗ, ಅರ್ಚಕ ರಮೇಶ ಭಟ್, ದೇವಸ್ಥಾನದ ಗುಮಾಸ್ತ ಪ್ರಶಾಂತ್ ಕೆಮ್ಮಿಂಜೆ, ಸಿಬಂದಿ ರಘುನಾಥ ಪೂಜಾರಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.


























