ವಿಟ್ಲ : ಜೆಸಿಐ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಟ್ಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಜೇಸಿ ಪೆವಿಲಿಯನಲ್ಲಿ ನಡೆಯಿತು.

ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಕಾರ್ಯದರ್ಶಿ ಮುರಳಿಪ್ರಸಾದ್, ಕೋಶಾಧಿಕಾರಿ ಲೂವಿಸ್ ಮಸ್ಕರೆನಸ್, ಜೇಸಿರೆಟ್ ಸಿಂಧೂ ಶೆಟ್ಟಿ ಹಾಗೂ ಜೆಜೆಸಿ ಸಾನ್ವಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.
ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಮಾತನಾಡಿ, ಮುಂದಿನ ಅವಧಿಯಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದ್ದು, ವಿಟ್ಲ ಜೇಸಿ ಸಂಸ್ಥೆ ಮೂಲಕ ಇನ್ನಷ್ಟು ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಪದಗ್ರಹಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಜೇಸೀಸ್ ಶಾಲೆಯ ಅಧ್ಯಕ್ಷ ಎಲ್ ಎನ್ ಕೂಡೂರು, ಜೆಸಿಐ ಇಂಡಿಯಾದ ಮಾಜಿ ತರಬೇತುದಾರ ವಿಜಯ ವಿಷ್ಣು ಮಯ್ಯ ಹಾಗೂ ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು ಅವರು ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಎರಡು ಅಂಗವಿಕಲ ಮಕ್ಕಳಿಗೆ ವೀಲ್ ಚೈರ್, ಎರಡು ಮಕ್ಕಳಿಗೆ ವಾಕರ್ ನೀಡಲಾಯಿತು.
ರಿತೇಶ್ ಶೆಟ್ಟಿ, ಅಭಿಷೇಕ್ ಬಲ್ಲಾಳ, ಸಂದೀಪ್, ನಾರಾಯಣ ಪ್ರಕಾಶ್, ಸೌಮ್ಯ, ರಜಿತ್ ಆಳ್ವಾ, ಶಿವಾನಿ ಶೆಟ್ಟಿ, ನವೀನ್ ಕುಮಾರ್, ಜೇಸನ್ ಪಿಂಟೊ, ಕ್ಲಿಫರ್ಡ್ ವೇಗಸ್, ಹೇಮಲತಾ, ಹರ್ಷಿತ್ ಕುಮಾರ್, ಸಾರಿಕಾ, ಸುಧೀರ್, ಆರ್ತಿಕ್, ಅರುಣ್, ಪ್ರವೀಣ್, ಅಶ್ವಿನಿ ಉಪಸ್ಥಿತರಿದ್ದರು. ಪರಮೇಶ್ವರ ಹೆಗ್ಡೆ ಸ್ವಾಗತಿಸಿದರು. ಮುರಳಿ ಪ್ರಸಾದ್ ವಂದಿಸಿದರು.


























