ಲೋಕಸಭೆ ಸದನದ ಸಮಯದಲ್ಲಿ ಭದ್ರತಾ ಲೋಪ ಎದುರಾಗಿದೆ. ಇಬ್ಬರು ಅಪರಿಚಿತರು ಸದನದೊಳಗೆ ನುಗ್ಗಿ ಎಲ್ಲರನ್ನು ಗಾಬರಿಗೊಳಿಸುವಂತೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನದ ಒಳನುಗ್ಗಿದ್ದಾರೆ. ಇದನ್ನು ಅಲ್ಲಿದ್ದವರು ಗಮನಿಸಿದ್ದಾರೆ. ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಸದನದ ಒಳಗೆ ನುಗ್ಗಿದ್ದಾರೆ. ಬಂಧಿತರ ಬಳಿ ಹಳದಿ ಬಣ್ಣ ಟಿಯರ್ ಗ್ಯಾಸ್ ಇರುವುದು ಬೆಳಕಿಗೆ ಬಂದಿದೆ. ಇನ್ನು ಅಪರಿಚಿತ ಸದನದೊಳಗೆ ನುಗ್ಗಿದ ಪರಿಣಾಮ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಈ ಘಟನೆ ಬಗ್ಗೆ ವಿವರಿಸಿದ್ದು, ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಟಿಯರ್ ಗ್ಯಾಸ್ ಹಿಡಿದುಕೊಂಡು ಸದನದ ಒಳಗೆ ಬಂದಿದ್ದಾರೆ. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದ್ದಾನೆ. ಮಾತ್ರವಲ್ಲದೆ ಆತ ಕೆಲವು ಘೋಷಣೆಗಳನ್ನು ಕೂಗುತ್ತಿದ್ದನು ಎಂದು ಹೇಳಿದ್ದಾರೆ.
22 ವರ್ಷದ ಬಳಿಕ ಅಂದರೆ 2001 ಡಿಸೆಂಬರ್ 13 ರಂದು ಸಂಸತ್ತಿನ ಮೇಲೆ ದಾಳಿ ನಡೆದಿತ್ತು. ಭದ್ರತಾ ಉಲ್ಲಂಘನೆಯಾಗಿ ದಾಳಿ ನಡೆದಿತ್ತು. ಇದೀಗ ಮತ್ತೆ ಅದೇ ರೀತಿ ಅಪರಿಚಿತರಿಬ್ಬರ ಸದನದ ಒಳಗೆ ನುಗ್ಗಿ ಭಯದ ವಾತವರಣ ನಿರ್ಮಿಸಿದ್ದಾರೆ.


























