ಮಂಗಳೂರು : ಬೆಳಗಾವಿ ಸುವರ್ಣ ಸೌಧದಲ್ಲಿರುವ ವೀರ ಸಾವರ್ಕರ್ ಫೋಟೋ ತೆರವು ವಿಚಾರವಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಎಸ್.ಡಿ.ಪಿ.ಐ ಮುಖಂಡನನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಿಯಾಜ್ ಕಡಂಬು ಬಂಧಿತ ಎಸ್ಡಿಪಿಐ ಮುಖಂಡ.
ರಿಯಾಜ್ ಫೇಸ್ ಬುಕ್ನಲ್ಲಿ ಖಾದರ್ ವಿರುದ್ಧ ರಿಯಾಜ್ ಪೋಸ್ಟ್ ಹಾಕಿದ್ದು, ಸದ್ಯ ಮಂಗಳೂರಿನ ಉರ್ವ ಠಾಣೆಯಲ್ಲಿ ರಿಯಾಜ್ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

























