ಸುಳ್ಯ : ತಾಲೂಕಿನ ಮಂಡೆಕೋಲು ಗಡಿ ಪ್ರದೇಶದಲ್ಲಿ 9 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಈ ಭಾಗದಲ್ಲಿ ಕಳೆದ ಹಲವು ಸಮಯಗಳಿಂದ ಕಾಡಾನೆ ಹಿಂಡು ಬೀಡು ಬಿಟ್ಟಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
9 ಆನೆಗಳ ಹಿಂಡು ಮಂಡೆಕೋಲು ಸಮೀಪದ ಪಂಜಿಕಲ್ಲು ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಕಂಡು ಬಂದಿದೆ.
ಮರಿ ಆನೆ ಸಹಿತ ಆನೆಗಳ ಹಿಂಡು ಇದೇ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ನಿರಂತರ ದಾಳಿ ನಡೆಸುತ್ತಿದೆ. ಮನೆಯ ಸಮೀಪಕ್ಕೂ ದಾಂಗುಡಿಯಿಡುವ ಗಜ ಪಡೆಗಳು ಭೀತಿ ಹುಟ್ಟಿಸುತ್ತಿವೆ.


























