ಪುತ್ತೂರು : ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಕಬಕ ಸಮೀಪ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರನ್ನು ಬಿ.ಸಿ.ರೋಡ್ ಮೂಲದ ಆಶಿಮ್ ಎಂದು ಗುರುತಿಸಲಾಗಿದೆ.

ಬೈಕ್ ಬಸ್ಸಿನಡಿಗೆ ಎಸೆಯಟ್ಟಿದ್ದು, ಸಂಪೂರ್ಣ ಜಖಂಗೊಂಡಿದೆ.
ಬಸ್ ರಸ್ತೆ ಬಿಟ್ಟು ಬದಿಯ ಕಣಿವೆಗೆ ಜಾರಿ ನಿಂತಿದೆ ಎನ್ನಲಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























