ಬಂಟ್ವಾಳ : ದತ್ತ ಜಯಂತಿ 2023ರ ಸಲುವಾಗಿ ಮಂಗಳೂರು ವಿಭಾಗದ ದತ್ತ ಮಾಲಧಾರಣೆಯು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಸುನಿಲ್ ಕೆ.ಆರ್., ಬಜರಂಗದಳದ ಪ್ರಾಂತ ಸಹ ಸಂಯೋಜಕರಾದ ಮುರಳಿಕೃಷ್ಣ ಹಸಂತಡ್ಕ, ಬಜರಂಗದಳ ವಿಭಾಗ ಸಹ ಸಂಯೋಜಕರಾದ ಪುನೀತ್ ಅತ್ತಾವರ, ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೇಲ್, ಸಹ ಸಂಯೋಜಕರಾದ ಲತೀಶ್ ಗುಂಡ್ಯ, ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ಪುತ್ತೂರು ನಗರ ಸಂಯೋಜಕರಾದ ಜಯಂತ್ ಕುಂಜೂರುಪಂಜ, ಜಿತೇಶ್ ಬಲ್ನಾಡ್, ಪ್ರವೀಣ್ ಕಲ್ಲೇಗ, ಕೇಶವ ಪ್ರಸಾದ್, ಜೀವನ್ ಬಲ್ನಾಡ್ ಮತ್ತು ನೂರಾರು ಕಾರ್ಯಕರ್ತರು ಮಾಲಧಾರಣೆ ಮಾಡಿದರು.

ಡಿಸೆಂಬರ್ 17 ರಿಂದ ಪ್ರಾರಂಭಗೊಂಡು ಡಿಸೆಂಬರ್ 26ರ ದತ್ತ ಜಯಂತಿಯವರೆಗೆ ನಡೆಯಲಿದೆ. ಡಿಸೆಂಬರ್ 26ರಂದು ಸಾವಿರಾರು ದತ್ತ ಭಕ್ತರು, ಬಜರಂಗದಳದ ಕಾರ್ಯಕರ್ತರು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ.




























