ಈಶ್ವರಮಂಗಲ : ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಸಕ್ರೀಯ ಕಾರ್ಯಕರ್ತ ಮತ್ತು ಅಯ್ಯಪ್ಪ ಮಾಲಾಧಾರಿ ಪ್ರವೀಶ್ ರವರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಲಾಗಿದ್ದು, ಪುತ್ತಿಲ ಪರಿವಾರದ ವತಿಯಿಂದ ಗಡಿಪಾರು ಆದೇಶ ವಾಪಾಸ್ ಪಡೆಯುವಂತೆ ಮನವಿ ಸಲ್ಲಿಸಲಾಯಿತು.

ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ರವರಿಗೆ ಅರುಣ್ ಕುಮಾರ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಮನವಿ ಸಲ್ಲಿಸಿದರು.
ಗಡಿಪಾರು ಆದೇಶವನ್ನು ಹಿಂಪಡೆಯುವಂತೆ ಹಾಗೂ ಗಡಿಪಾರು ಆದೇಶ ಮುಂದುವರಿದರೆ ಪ್ರತಿಭಟನಾ ನಡೆಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.



























