ಪುತ್ತೂರು : ವ್ಯಕ್ತಿಯೋರ್ವರ ಮನೆಗೆ ಬಳಿ ಬಂದು ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು ನೀಡಲಾಗಿದ್ದು, ಈ ಬಗ್ಗೆ ಕಡಬ ಪೊಲೀಸ್ ಪ್ರಕರಣ ದಾಖಲಾಗಿದೆ.
ಕಡಬ ಚಾರ್ವಾಕ ನಿವಾಸಿ, ಮನೋಹರ ಬಿ ಎಂಬವರು ನೀಡಿರುವ ದೂರಿನ ಮೇರೆಗೆ ಗಣೇಶ ಉದನಡ್ಕ, ರಾಧಾಕೃಷ್ಣ ಮುದ್ವ, ಅಖಿಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೋಹರ್ ಡಿ.17 ರಂದು ರಾತ್ರಿ ಮನೆಯಲ್ಲಿದ್ದಾಗ ಮನೆಯ ಅಂಗಳಕ್ಕೆ ಗಣೇಶ ಉದನಡ್ಕ , ರಾಧಾಕೃಷ್ಣ ಮುದ್ವ , ಅಖೀಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಹಾಗೂ ಇತರರು ಬಂದು ಜಾತಿನಿಂದನೆ ಮಾಡಿ ಅವ್ಯಾಚವಾಗಿ ಬೈದಿದ್ದು, ಬಳಿಕ ಎಲ್ಲರು ಕೈಯಿಂದ ಹಲ್ಲೆ ಮಾಡಿದ್ದು, ರಾಧಾಕೃಷ್ಣ ಎಂಬವರು ಮರದ ಕೋಲಿನಿಂದ ಹಲ್ಲೆ ನಡೆಸಿರುತ್ತಾನೆ.
ಮನೋಹರ ರವರಿಗೆ ಹಲ್ಲೆ ನಡೆಸುವ ಸಮಯ ಅವರ ತಾಯಿ ರಕ್ತದದೊತ್ತಡ ಕಡಿಮೆಯಾಗಿ ಕುಸಿದುಬಿದ್ದಿದ್ದು, ಈ ವೇಳೆ ನೆರೆಮನೆಯವರು ಬರುವುದನ್ನು ಕಂಡ ಆರೋಪಿಗಳು ಜೀವ ಬೆದರಿಕೆ ಹಾಕಿ., ಹಲ್ಲೆ ನಡೆಸಿದ ಕೋಲನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2023 ಕಲಂ: 143, 147, 447, 504, 323, 324, 506,149 ಹಾಗೂ SC & ST (prevention of atrocities amendment act 2015 u/s-3(1) (r) (s), 3 (2) (va)) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























