ಧರ್ಮಸ್ಥಳ : ಹೆಂಡತಿ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಸುರೇಶ್ ಗೌಡ ಬಂಧಿತ ಆರೋಪಿ.
ಬೆಳ್ತಂಗಡಿ ಶಿಶಿಲ ನಿವಾಸಿ ಮೋಹಿನಿ ಎಂಬವರ ಪತಿ ಸುರೇಶ್ ಕಳೆದ ಹಲವು ಸಮಯಗಳಿಂದ ಮಹಿಳೆಗೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದು, ನ.18 ರಂದು ರಾತ್ರಿ ಮನೆಗೆ ಬಂದು, ಮಹಿಳೆಗೆ ಮತ್ತು ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.
ಬಳಿಕ ಮಹಿಳೆಗೆ ಕೈಯಿಂದ ಹಾಗೂ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ, ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ್ದು, ಸದ್ರಿಯವರ ಮಗಳಿಗೂ ಹಲ್ಲೆ ನಡೆಸಿದ್ದು, ಈ ವೇಳೆ ಆಕೆ ಓಡಿ ತಪ್ಪಿಸಿಕೊಂಡಿರುತ್ತಾರೆ. ಮಹಿಳೆಯೂ ಕೂಡಾ ಆರೋಪಿಯಿಂದ ತಪ್ಪಿಸಿಕೊಂಡು ತೋಟದಲ್ಲಿ ಕುಳಿತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 108/2023 ಕಲಂ: 323,324,326,504,506 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ., ಪ್ರಕರಣದ ಆರೋಪಿಯ ಪತ್ತೆಗಾಗಿ ತಕ್ಷಣ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಅನೀಲ್ ಕುಮಾರ್.ಡಿ, ಪಿ.ಎಸ್.ಐ ಸಮರ್ಥ ರವೀಂದ್ರ ಗಾಣಿಗೇರ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಶಶಿಧರ , ಪಿ.ಸಿ ಮಲ್ಲಿಕಾರ್ಜುನ ರವರ ತಂಡವು, ಬೆಳ್ತಂಗಡಿ ಶಿಶಿಲ ಎಂಬಲ್ಲಿ ಆರೋಪಿ ಬೆಳ್ತಂಗಡಿ ಶಿಶಿಲ ಗ್ರಾಮದ ಸುರೇಶ್ ಗೌಡ (56) ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.


























