ಬೆಂಗಳೂರು : ಹೈ ಎಂಡ್ ಬೈಕ್ ಆ್ಯಕ್ಸಿಡೆಂಟ್ನಲ್ಲಿ ಸವಾರ ಸಾವನ್ನಪ್ಪಿದ ಘಟನೆ ಅಶೋಕ ಪಿಲ್ಲರ್ ಬಳಿ ನಡೆದಿದೆ.
ಬೈಕ್ ಸವಾರ ಶೇಕ್ ನಾಸಿರ್(32) ಎಂಬಾತ ಸಾವನ್ನಪ್ಪಿದ್ದು, ಹಿಂಬದಿ ಸವಾರ ಸೈಯದ್ ಮುದಾಸಿರ್ ಎಂಬಾತನಿಗೆ ಗಂಭೀರ ಗಾಯವಾಗಿದೆ.
ನಿನ್ನೆ ರಾತ್ರಿ ಅಪಘಾತ ನಡೆದಿದೆ. 24 ಲಕ್ಷ ರೂಪಾಯಿಯ ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಅಪಘಾತಕ್ಕೀಡಾಗಿದೆ.
ಶೇಕ್ ನಾಸಿರ್ ಮತ್ತು ಸೈಯದ್ ಮುದಾಸಿರ್ ಇಬ್ಬರು ಬೈಕ್ ಡೀಲರ್ಸ್. ಮುದಾಸಿರ್ ಓರ್ವ ಗ್ರಾಹಕನಿಗೆ ಬೈಕ್ ನೋಡುತ್ತಿದ್ದು, ಅದೇ ಬೈಕ್ ಪರ್ಮಾರ್ಫೆನ್ಸ್ ತೋರಿಸಲು ಶೇಕ್ ನಾಸಿರ್ ಆತನ ಬಳಿಗೆ ಬಂದಿದ್ದನು. ಮಾಧವ ಪಾರ್ಕ್ ಕಡೆಯಿಂದ ಅಶೋಕ ಫಿಲ್ಲರ್ ಕಡೆ ಬರುತ್ತಿದ್ದರು. ಈ ವೇಳೆ ಕನಕಪಾಳ್ಯ ಕಡೆಯಿಂದ ಬರ್ತಿದ್ದ ಬಲೆನೊ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.
ಯೂ ಟರ್ನ್ ತೆಗೆದುಕೊಳ್ತಿದ್ದ ವೇಳೆ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಹಿಂಬದಿ ಸವಾರ ಸೈಯದ್ ಮುದಾಸಿರ್ ಬೈಕ್ ಮೇಲಿಂದ ಹಾರಿಬಿದ್ದಿದ್ದಾನೆ. ಅತ್ತ ಸವಾರ ಶೇಕ್ ನಾಸಿರ್ ಕಾರಿಗೆ ಕಚ್ಚಿಕೊಂಡಿದ್ದನು. ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೇಕ್ ನಾಸಿರ್ ಸಾವನ್ನಪ್ಪಿದ್ದಾನೆ. ಈ ಬಗ್ಗೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























