ವೇಣೂರು : ಸುಮಾರು 6-7 ವರುಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಯ, ಐವತ್ತೋಕ್ಲು ನಿವಾಸಿ ಶರೀಫ್ (ಮಹಮ್ಮದ್ ಶರೀಫ್) ಬಂಧಿತ ಆರೋಪಿ.

ಶರೀಫ್ ವೇಣೂರು ಪೊಲೀಸ್ ಠಾಣಾ ಅ.ಕ್ರ 71/2008 ಕಲಂ 457,380 ಪ್ರಕರಣದ ಆರೋಪಿಯಾಗಿದ್ದು, ಸುಮಾರು 6-7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ., ಈತನನ್ನು ಡಿ.21 ರಂದು ವೇಣೂರು ಠಾಣಾ ಸಿಬ್ಬಂದಿಗಳಾದ ಪ್ರವೀಣ್ ಎಂ ಮತ್ತು ಸಚಿನ್ ವಿಟ್ಲದ ಸಾರಡ್ಕ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

























