ಬಂಟ್ವಾಳ : ಬೋಳಂತೂರು ಬಿರುಕೋಡಿ ಮಲ್ಯ ಕೊರಗಜ್ಜ ದೈವದ 5ನೇ ವರ್ಷದ ವಾರ್ಷಿಕ ಕೋಲೋತ್ಸವವು ಡಿ.24-25 ರಂದು ನಡೆಯಲಿದೆ.

ಬೋಳಂತೂರು ಬಿರುಕೋಡಿ ಮಲ್ಯ ಕೊರಗಜ್ಜ ಸಾನಿಧ್ಯದಲ್ಲಿ ಡಿ.24 ರಂದು ಉದಯ ಗುರುಸ್ವಾಮಿ ಹೊಸಹಿತ್ಲು ತರವಾಡು ದೇವಸ್ಥಾನ. ಉದ್ಯಾವರ ಮಂಜೇಶ್ವರ. ಇವರ ನೇತೃತ್ವದಲ್ಲಿ ಪಂಚಮ ವರ್ಷದ ವಾರ್ಷಿಕ ಕೋಲೋತ್ಸವವು ಜರಗಲಿರುವುದು ಹಾಗೂ ಬೆಳಿಗ್ಗೆ ಗಂಟೆ 7ಕ್ಕೆ ಗಣಹೋಮ ಮದ್ಯಾಹ್ನ 2ರಿಂದ ಸಂಜೆ 6ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಜೆ ಗಂಟೆ 7ರಿಂದ ರಾತ್ರಿ ಗಂಟೆ 11ರ ವರೆಗೆ ಶ್ರೀ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದೀತ ಯಕ್ಷಗಾನ ಮಂಡಳಿ ಸರಪಾಡಿ ಮೇಳದವರಿಂದ ರವಿಕುಮಾರ್ ಸುರತ್ಕಲ್ ವಿರಚಿತ ನಾಗರ ಪಂಚಮಿ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಗಂಟೆ 8 30ರಿಂದ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ನಂತರ ಕೊರಗಜ್ಜ ದೈವದ ನರ್ತನ ಸೇವೆ ನಡೆಯಲಿದೆ,
ಡಿ.25 ರಂದು ರಾತ್ರಿ ಗಂಟೆ 7ಕ್ಕೆ ಕೊರಗಜ್ಜ ದೈವಕ್ಕೆ ಅಗೇಲು ಸೇವೆ ಹಾಗೂ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.





























