ಉತ್ತರ ಪ್ರದೇಶ : ವರದಕ್ಷಿಣೆಯಾಗಿ ಹುಂಡೈ ಕ್ರೆಟಾ ಕಾರು ಬದಲು ಸ್ವಿಫ್ಟ್ ಕಾರು ಕೊಟ್ಟಿದ್ದಕ್ಕೆ ವರ ಮದುವೆಯಾಗಲ್ಲವೆಂದ ಅಚ್ಚರಿಯ ಪ್ರಕರಣವೊಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬೆಳಕಿಗೆ ಬಂದಿದೆ.
ವರದಕ್ಷಿಣೆಯಲ್ಲಿ ಕ್ರೆಟಾ ಕಾರು ಬದಲು ಸ್ವಿಫ್ಟ್ ಕಾರು ಸಿಕ್ಕಿದ್ದಕ್ಕೆ ಕೋಪಗೊಂಡು ವರನೊಬ್ಬ ಮದುವೆಯಾಗಲು ಒಪ್ಪಲಿಲ್ಲ. ನಿಶ್ಚಿತಾರ್ಥದಲ್ಲಿ ಕ್ರೆಟಾ ಕಾರು ನೀಡುವುದಾಗಿ ಹೇಳಿದ್ರಿ. ಈಗ ಸ್ವಿಫ್ಟ್ ಕಾರನ್ನು ಯಾಕೆ ನೀಡುತ್ತಿದ್ದೀರಾ ಎಂದು ವರ ಪ್ರಶ್ನೆ ಮಾಡಿದ್ದಾನೆ. ವರ ಈ ವಿಚಾರವಾಗಿ ಮದುವೆಯಾಗಲು ನಿರಾಕರಿಸ ತೊಡಗಿದ್ದಾನೆ.
ಮಗಳ ಮದುವೆಗೆ., ನಿಶ್ಚಿತಾರ್ಥಕ್ಕೆ ಅಂತ ವಧುವಿನ ಮನೆಯವರು ಚಿನ್ನಾಭರಣಗಳನ್ನ ಅಡವಿಟ್ಟಿದ್ರು. ಇದನ್ನು ವಧುವಿನ ಕುಟುಂಬ ಕೂಡ ಪ್ರಸ್ತಾಪಿಸಿದೆ. ಈಗಾಗಿ ಎರಡೂ ಸಮುದಾಯದ ಹಿರಿಯರು ಮಧ್ಯಪ್ರವೇಶಿಸಿ ವರನ ಕಡೆಯವರು ಮದುವೆಗೆ ಖರ್ಚು ಮಾಡಿದ್ದನ್ನು ಕೂಡಲೇ ವಾಪಸ್ ನೀಡುವಂತೆ ಒಪ್ಪಂದ ಮಾಡಿದ್ದಾರೆ. ಒಪ್ಪಂದಂತೆ ವರನ ಕುಟುಂಬದಿಂದ 17 ಲಕ್ಷ 25 ಸಾವಿರ ರೂಪಾಯಿ ನೀಡಲು ನಿರ್ಧರಿಸಲಾಗಿದೆ.


























