ಪುಂಜಾಲಕಟ್ಟೆ : ಹಣ ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅದೃಷ್ಟದ ಆಟ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ದಡ್ಡರದೊಟ್ಟು ಎಂಬಲ್ಲಿ ನಡೆದಿದೆ.
ಅಜ್ಜಿಬೆಟ್ಟು ನಿವಾಸಿ ಯೋಗೀಶ್, ಚೆನ್ನೈತ್ತೋಡಿ ನಿವಾಸಿ ಮಹಮ್ಮದ್ ಶಾಫಿ, ಕೋಡಿಂಬಾಡಿ ನಿವಾಸಿ ನಾಗೇಶ್ ಶೆಟ್ಟಿ, ಕೃಷ್ಣಪ್ಪ, ಅಜ್ಜಿಬೆಟ್ಟು ನಿವಾಸಿ ಸಂದೇಶ್ ಶೆಟ್ಟಿ, ಸಂಗಬೆಟ್ಟು ನಿವಾಸಿ, ಉಮರಬ್ಬ, ಚೆನ್ನೈತ್ತೋಡಿ ನಿವಾಸಿ ಗೋಪಾಲ ಬಂಧಿತರು.
ಡಿ.22 ರಂದು ಬಂಟ್ವಾಳ ತಾಲೂಕು ಆಜ್ಜಿಬೆಟ್ಟು ಗ್ರಾಮದ ದಡ್ಡರದೊಟ್ಟು ಎಂಬಲ್ಲಿಯ ಕಟ್ಟಡದೊಳಗೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಅದೃಷ್ಟದ ಆಟವನ್ನು ಆಡುತ್ತಿದ್ದಾಗ ಪುಂಜಾಲಕಟ್ಟೆ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ಎಂಎಂ ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ಆರೋಪಿತರಿಂದ ಜುಗಾರಿ ಆಟಕ್ಕೆ ಬಳಸಿದ ವಿವಿಧ ಮುಖ ಬೆಲೆಯ ಒಟ್ಟು 51,100/- ಹಣ, ಜುಗಾರಿ ಆಡಲು ಉಪಯೋಗಿಸಿದ 1450 ರೂ ಬೆಲೆಯ ಸೊತ್ತುಗಳನ್ನು ಹಾಗೂ ರೂ 3,00,000/- ಬೆಲೆಯ ವಿವಿಧ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಪುಂಜಾಲ ಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 114-2023 ಕಲಂ : 79, 80 ಕೆಪಿ ಆಕ್ಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























