ಪುತ್ತೂರು : ಹಿಂದೂ ಜಾಗರಣ ವೇದಿಕೆ ಶಿವಾಜಿ ಶಾಖೆ ಪುರುಷರಕಟ್ಟೆ ವತಿಯಿಂದ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರಕಟ್ಟೆಯ ಮುಂಭಾಗದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ಬಂಗಾರ್ ಕಲಾವಿದರು ಪುರುಷರ ಕಟ್ಟೆ ಪುತ್ತೂರು ಇವರ ಕುಡ ಒಂಜಕಾ ತುಳು ಹಾಸ್ಯಮಯ ಸಾಮಾಜಿಕ ನಾಟಕ ನಡೆಯಿತು.

ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಸ್ವಸ್ತಿಕ್ ಸರ್ವೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಪ್ರಸಾದ್ ಸಮೃದ್ಧಿ ಮಾಡಿದರು. ಅಧ್ಯಕ್ಷತೆಯನ್ನು ಶರತ್ ಚಂದ್ರ ಬೈಪಾಡಿತಾಯ ವಹಿಸಿದ್ದರು.

ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಟೋಲಿ ಸದಸ್ಯರು ಗಣರಾಜ್ ಭಟ್ ಕೆದಿಲ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ವಕೀಲರು, ಚಿನ್ಮಯ್ ಈಶ್ವರಮಂಗಲ, ಅತಿಥಿಯಾಗಿ ಆಗಮಿಸಿದ ಯುವ ಧಾರ್ಮಿಕ ಮುಂದಾಲು ಗಿತೇಶ್ ಮಾಡಪ್ಪಡಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರಿಗೆ ಮತ್ತು ನಾಟಿ ವೈದ್ಯರಿಗೆ ಮತ್ತು ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಯೋಧ್ಯಕರೆ ಸೇವೆಯಲ್ಲಿ ಭಾಗವಹಿಸಿದ ಸೀತಾರಾಮ ಆಚಾರ್ಯ, ನಾಟಿವೈದ್ಯ ನಾರ್ನಪ್ಪ ಸಾಲಿಯಾನ್ ಮರಕ್ಕುರು
ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರವಿಶಂಕರ್ ಶಾಸ್ತ್ರಿ ಮಣಿಲ ರವರಿಗೆ ತುಳುನಾಡ ಕಲಾ ತಪಸ್ವಿ ಎಂಬ ಬಿರುದನ್ನು ಹಿಂದೂ ಜಾಗರಣ ವೇದಿಕೆ ಪುರುಷರ ಕಟ್ಟೆ ಇವರು ನೀಡಿದರು.

ಹಿಂದೂ ಜಾಗರಣ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ರಾಧಾಕೃಷ್ಣ ಅಡ್ಯಂತಾಯ, ಹಿಂದೂ ಮುಖಂಡರಾದ ಅಶೋಕ್ ತ್ಯಾಗರಾಜನಗರ, ರಾಜೇಶ್ ಪಂಚೋಡಿ, ಪುಷ್ಪರಾಜ್ ದರ್ಬೆ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಡಾ. ಸುರೇಶ್ ಪುತ್ತೂರಾಯ, ಪ್ರಜ್ವಲ್ ಈಶ್ವರಮಂಗಳ, ಸರಸ್ವತಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಅವಿನಾಶ್ ಕೊಡಂಕಿರಿ, ಜಯರಾಮ್ ಪೂಜಾರಿ ನವೀನ್ ರೈ ಶಿಬರ, ಸುಧಕರ ಕುಲಾಲ್. ಯಶೋದಾ ಬಜಪ್ಪಳ, ಉಮೇಶ್ ಇಂದಿರ ನಗರ. ಮೋಹನ್ ರೈ ನರಿಮೊಗರು ಉಪಸ್ಥಿತರಿದ್ದರು.

ಪವನ್ ಪುರುಷರ ಕಟ್ಟೆ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು.

























