ಪುತ್ತೂರು: ಕೊಳ್ತಿಗೆ ಬಾಯಂಬಾಡಿ ನಿವಾಸಿ ಯುವಕನೋರ್ವ ಕೋಮಿಡ್‌ಗೆ ಬಲಿಯಾಗಿದ್ದಾರೆ. ಬಾಯಂಬಾಡಿ ಸುಂದರ ಗೌಡರವರ ಮಗ ಪ್ರಮೋದ್ ಕುಮಾರ್ (37ವ.) ಮೃತಪಟ್ಟವರು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಮೋದ್ ರವರು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಮೇ 4ರಂದು ಊರಿಗೆ ಬಂದಿದ್ದರು.
ಬರುವಾಗಲೇ ಜ್ವರ ಕಾಣಿಸಿಕೊಂಡಿದ್ದರಿಂದ ಅವರು ತನ್ನ ಮನೆಗೆ ಹೋಗದೆ ನೇರವಾಗಿ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು.ಅಲ್ಲಿ ಪರೀಕ್ಷೆ ನಡೆಸಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು . ನಂತರ ಪುತ್ತೂರಿನಿಂದ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಮೇ 18ರಂದು ಸಾವಿಗೀಡಾಗಿದ್ದಾರೆ.ಮೃತರು
ತಂದೆ,ತಾಯಿ, ಓರ್ವ ಸಹೋದರಿ, ಇಬ್ಬರು ಸಹೋದರರು ಮತ್ತು ಪತ್ನಿ ಉಷಾಕುಮಾರಿ ಹಾಗೂ ಗಂಡು ಮಗುವನ್ನು ಅಗಲಿದ್ದಾರೆ.