ಪುತ್ತೂರು : ಲಿಟ್ಲ್ ಫ್ಲವರ್ ಶಾಲೆ ದರ್ಬೆಯಲ್ಲಿ ವಿಶ್ವಶಾಂತಿಯ ಮೂರ್ತ ಸ್ವರೂಪ. ಕ್ಷಮೆಯ ಸಾಕಾರ ಮೂರ್ತಿ, ಯೇಸುಕ್ರಿಸ್ತರ ಹುಟ್ಟುಹಬ್ಬದ ಸಂಭ್ರಮ ‘ಕ್ರಿಸ್ ಮಸ್ ಆಚರಣೆ’ಯನ್ನು ಶಾಲಾ ಸಂಚಾಲಕರಾದ ಪ್ರಶಾಂತಿ ಬಿ.ಎಸ್. ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ವೇದಿಕೆಯಲ್ಲಿ ದಾನಿಗಳು, ಉದ್ಯಮಿಗಳು ಆದ ರೋಡ್ರಿಗಸ್ ಚಿಕನ್ ಸೆಂಟರ್ ಮಾಲಕರಾದ ಲ್ಯಾನ್ಸಿ ರೋಡ್ರಿಗಸ್, ಅವರ ಪತ್ನಿ ಗ್ಲಾಡಿಯಸ್ ರೋಡ್ರಿಗಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಮಮತಾ ಶ್ರೀವಾತ್ಸವ್, ಬ್ಯಾಂಕ್ ಆಫ್ ಬರೋಡದ ಪ್ರಬಂಧಕರಾದ ಸುಗಣಾವತಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ.ಎಸ್. ಉಪಸ್ಥಿತರಿದ್ದರು.

6ನೇ ತರಗತಿ ಮಕ್ಕಳಿಂದ ಯೇಸು ಕ್ರಿಸ್ತರ ಜನನದ ಕುರಿತಾದ ನೃತ್ಯ ರೂಪಕ, ಹಾಡು ಮತ್ತು ನೃತ್ಯ ಪ್ರಸ್ತುತಗೊಂಡಿತು. ಬಳಿಕ ಶಾಲೆಗೆ ಹಲವು ರೂಪದ ಸಹಕಾರ ನೀಡಿರುವ ಕೊಡುಗೈ ದಾನಿಗಳಾದ ಉದ್ಯಮಿಗಳಾದ ರೋಡ್ರಿಗಸ್ ಚಿಕನ್ ಸೆಂಟರ್ ಮಾಲಕರಾದ ಲ್ಯಾನ್ಸಿ ರೋಡ್ರಿಗಸ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಆರಾಧನಾ ಸ್ವಾಗತಿಸಿ, ಲಿಖಿತ್ ಎಸ್ ಗೌಡ ವಂದಿಸಿ, ಜುವೆನ್ನಾ ಕುಟಿನ್ಹಾ, ಆಯಿಷತ್ ತೌಫೀರ ಕಾರ್ಯಕ್ರಮ ನಿರೂಪಿಸಿದರು.

























