ತೆಲಂಗಾಣ : ಇಲಿ ಕಚ್ಚಿದ ಪರಿಣಾಮ 40 ದಿನಗಳ ಮಗುವೊಂದು ಸಾವನ್ನಪ್ಪಿದ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಾಗನೂಲು ಗ್ರಾಮದ ಲಕ್ಷ್ಮೀಕಲಾ ಮತ್ತು ಶಿವಾ ದಂಪತಿ 40 ದಿನಗಳ ಹಿಂದೆ ಮಗುವೊಂದಕ್ಕೆ ತಂದೆ-ತಾಯಿಯಾದರು. ಹೆರಿಗೆಯ ಬಳಿಕ ಲಕ್ಷ್ಮೀ ತವರಿನಲ್ಲೇ ಉಳಿದುಕೊಂಡಿದ್ದು, ಮಗುವಿನ ಆರೈಕೆಯನ್ನ ಅಲ್ಲೇ ಮಾಡುತ್ತಿದ್ದರು.
ಆದರೆ ಎರಡು ದಿನಗಳ ಹಿಂದೆ ಮಗುವಿನ ಮೂಗಿನ ಭಾಗಕ್ಕೆ ಇಲಿ ಕಚ್ಚಿದೆ. ಇದರಿಂದ ಮಗುವಿಗೆ ರಕ್ತಸ್ರಾವವಾಗಿದೆ. ಮಗುವನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರು, ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಹೋಗಲು ವೈದರೂ ಸೂಚಿಸಿದ್ದಾರೆ.
ವೈದ್ಯರ ಮಾತಿನಂತೆ ಮಗುವನ್ನು ಹೈದರಾಬಾದ್ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.


























