ಬಂಟ್ವಾಳ : ಶ್ರೀವರ ಯುವಕ ಮಂಡಲ (ರಿ.) ಪೂರ್ಲಪ್ಪಾಡಿ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 2ನೇ ವರುಷದ ಹೊನಲು ಬೆಳಕಿನ ಪುರುಷರ 62 ಕೆ.ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ‘ಶ್ರೀವರ ಟ್ರೋಫಿ-2023’ ಡಿ.30 ರಂದು ನಡೆಯಲಿದೆ.
ವಿಟ್ಲಪಡ್ನೂರು ಪೂರ್ಲಪ್ಪಾಡಿ ಶ್ರೀವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನವಾಗಿ 8888 ರೂ. ಮತ್ತು ಶ್ರೀವರ ಟ್ರೋಫಿ, ದ್ವಿತೀಯ ಬಹುಮಾನವಾಗಿ 5555 ರೂ. ಮತ್ತು ಶ್ರೀವರ ಟ್ರೋಫಿ, ತೃತೀಯ ಬಹುಮಾನವಾಗಿ 2222 ರೂ. ಶ್ರೀವರ ಟ್ರೋಫಿ ಹಾಗೂ ಚತುರ್ಥ ಬಹುಮಾನವಾಗಿ 2222 ರೂ. ಶ್ರೀವರ ಟ್ರೋಫಿ ನೀಡಿ ಗೌರವಿಸಲಾಗುವುದು ಹಾಗೆಯೇ ಸವ್ಯಸಾಚಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಪ್ರಶಸ್ತಿ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
700 ರೂ. ಪ್ರವೇಶ ಶುಲ್ಕವಿದ್ದು, ಡಿ.28ರ ಮುಂಚಿತವಾಗಿ ತಂಡ ನೋಂದಾಯಿಸಬೇಕಾಗಿದೆ.



























