ಹಾವು ಅಂದರೆ ಸಾಕು ಎಲ್ಲರಿಗೂ ಭಯ ಬಂದು ಬಿಡುತ್ತದೆ. ಅದು ಕಣ್ಣಿಗೆ ಕಂಡ ತಕ್ಷಣ ಓಡಿ ಹೋಗುತ್ತೇವೆ. ಆದರೆ ಇಲ್ಲೊಂದು ಕಡೆ ಒಂದು ವರ್ಷದ ಮಗುವೊಂದು ಹೆಬ್ಬಾವಿನ ಜೊತೆ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಬ್ಬಾವು ಸಾಮಾನ್ಯ ಹಾವಲ್ಲ. ಇದರ ಕೈಗೆ ಒಮ್ಮೆ ಸಿಕ್ಕಿದ್ದಾರೆ ಅದು ಮೊದಲು ಸುತ್ತಿ ಹಾಕಿಕೊಳ್ಳುತ್ತದೆ. ಸುತ್ತಿ ಹಾಕಿಕೊಂಡರೆ ಮತ್ತೇ ಯಾರಿಗೂ ಬಿಡಿಸಲು ಆಗುವುದಿಲ್ಲ. ಬೃಹದಾಕಾರದ ಹೆಬ್ಬಾವುಗಳು ಪ್ರಾಣಿಗಳನ್ನು ಬಿಡಿ, ಮನುಷ್ಯರನ್ನು ಸಹ ಜೀವಂತವಾಗಿ ನುಂಗಿ ಬಿಡುತ್ತವೆ. ಆದರೆ ಈ ಮಗು ಹೆಬ್ಬಾವಿನ ಜೊತೆ ಆಟಿಕೆಯಂತೆ ಆಟ ಆಡುತ್ತಿದೆ. ಇದನ್ನು ಅಂತೂ ನೋಡುವಾಗ ಗಾಬರಿಯಾಗುತ್ತದೆ.
ಅಚ್ಚರಿಯ ವಿಷಯ ಏನೇಂದರೆ ಈ ಹೆಬ್ಬಾವು ಮಗುವಿಗೆ ಯಾವ ರೀತಿಯೂ ತೊಂದರೆ ಮಾಡಲಿಲ್ಲ. ಅದು ಅದರ ಪಾಡಿಗೆನೇ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೆ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಈ ಪುಟ್ಟ ಮಗುವಿನ ಧೈರ್ಯಕ್ಕೆ ಮೆಚ್ಚಲೇಬೇಕು ಎನ್ನುತ್ತಿದ್ದಾರೆ.


























