ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಮದುವೆಯಾದ ಮಹಿಳೆ ತನ್ನ ಪತಿಗೆ ವಂಚಿಸಲು ಯತ್ನಿಸಿದ ಘಟನೆಯೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಗರ್ಭಿಣಿ ಅಂತ ತವರಿಗೆ ಹೋಗಿ ಮತ್ತೊಂದು ಮದುವೆಯಾಗಲು ಯತ್ನಿಸಿದ್ದಾಳೆ. ಈ ಬಗ್ಗೆ 3ನೇ ಪತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಕಹಾನಿ..?
ಪ್ರಶಾಂತ್.ಬಿ ಎಂಬ ವಿವಾಹಿತ ದಾವಣಗೆರೆಯಲ್ಲಿ ತನ್ನ ಪತ್ನಿ ಮಿಸ್ಸಿಂಗ್ ಎಂದು ಪೊಲೀಸ್ ಠಾಣೆಗೆ ತೆರಳಿ ಕೇಸ್ ದಾಖಲಿಸಿಕೊಂಡಿದ್ದಾನೆ. ಆದರೀಗ ಮಹಿಳೆಯ ನಿಜ ಸಂಗತಿ ಬಟಾಬಯಲಾಗಿದೆ.
2022 ಫೆ.22 ರಂದು ಪ್ರಶಾಂತ್ .ಬಿ ಎಂಬಾತನ ಜೊತೆ ಮಹಿಳೆಗೆ ಮದುವೆ ಆಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಮಾರು ಒಂದೂವರೆ ವರ್ಷದಿಂದ ಸಂಸಾರ ಮಾಡಿದ್ದರು.
ಮಹಿಳೆ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ ಮಾಡುತ್ತಿದ್ದಳು. ಆದರೆ 3 ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದ ಪತ್ನಿ ವಾಪಸ್ ಬಂದಿಲ್ಲ. ಮಾತ್ರವಲ್ಲದೆ, ಟ್ಯಾಬ್ಲೆಟ್ ಸಹಾಯದಿಂದ ಗರ್ಭಪಾತ ಮಾಡಿಕೊಂಡಿದ್ದಾಳೆಂದು ಪತಿ ಆರೋಪ ಮಾಡಿದ್ದಾನೆ.
ಇನ್ನು ಕಾಣೆಯಾಗಿದ್ದ ಪತ್ನಿಯನ್ನು ಹುಡುಕಿಕೊಂಡು ಬಂದ ಪತಿ ಪ್ರಶಾಂತ್ ದಾವಣಗೆರೆಯಲ್ಲಿ ದೂರು ನೀಡಿದ್ದಾನೆ. ಹೆಂಡತಿ ವಿರುದ್ಧ 420 ಕೇಸ್ ದಾಖಲಿಸಿದ್ದಾನೆ. ಡಿಸೆಂಬರ್ 21ರಂದು ದೂರು ನೀಡಿದ್ದಾನೆ. ಅತ್ತ ದಾವಣಗೆರೆಯಲ್ಲಿ ಪತಿ ದೂರುಕೊಟ್ಟಂತೆ ಇತ್ತ ಮಂಡ್ಯದಲ್ಲಿ ಪತ್ನಿ ಪ್ರತ್ಯಕ್ಷವಾಗಿದ್ದಾಳೆ. ನಾನು ನಾಲ್ಕು ಮದುವೆಯಾಗಿಲ್ಲ, ಮೂರು ಮದುವೆಯಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾಳೆ.
ಪತಿ ಪ್ರಶಾಂತ್ ತನ್ನ ಹೆಂಡತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾನೆ. ಮದುವೆಯಾಗಿ ವಂಚಿಸುವುದೇ ಕಾಯಕ ಮಾಡಿಕೊಂಡಿದ್ದಾಳೆ. ನಾಲ್ವರನ್ನು ಮದುವೆಯಾಗಿ ವಂಚನೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾನೆ.
ಮಹಿಳೆ ಮೈಸೂರು ಹತ್ತಿರದ ಬೆಳಗೊಳ ಹಾಗೂ ಬೆಂಗಳೂರಿನ ಯುವಕನನ್ನು ಈ ಮೊದಲು ವಿವಾಹವಾಗಿದ್ದಳು. ಬಳಿಕ ಪ್ರಶಾಂತ್ ಜೊತೆಗೆ ಮತ್ತೊಬ್ಬನನ್ನು ಮದುವೆಯಾಗಿ ವಂಚಿಸಿದ್ದಳು. 4ನೇ ಗಂಡನ ಜೊತೆ ಇದ್ದು ಬೇರೆ ಯುವಕನನ್ನು ಲವ್ ಮಾಡಿದ್ದಾಳೆ ಎಂದು ಪ್ರಶಾಂತ್ ಆರೋಪಿಸಿದ್ದಾನೆ.
ಹೆಂಡತಿಯ ವಿರುದ್ಧ ಪ್ರಶಾಂತ್ 420 ಕೇಸ್ ಸಹ ದಾಖಲಿಸಲು ಮುಂದಾಗಿದ್ದು, ರೀಲ್ಸ್ ನೋಡಿ ಯಾರು ಮೋಡಿಯಾಗಬೇಡಿ ಅಂತ ಪತಿರಾಯ ಪ್ರಶಾಂತ್ ಮನವಿ ಮಾಡಿಕೊಂಡಿದ್ದಾನೆ. ಜೊತೆಗೆ ನಾವು 4 ಮದುವೆಯಾದ್ರೆ ತಪ್ಪು, ಮಹಿಳೆ 4-5 ಮದುವೆ ಆಗಬಹುದಾ?. ನನಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು ಅಂತ ದೂರು ನೀಡಿದ್ದಾನೆ. ರೀಲ್ಸ್ ನೋಡಿ ಮದುವೆ ಆದೆ, ಮೇಕಪ್ ನೋಡಿ ಮೋಸ ಹೋದೆ. ರೀಲ್ಸ್ ಸೌಂದರ್ಯಕ್ಕೆ ಮರುಳಾಗಬೇಡಿ ಎಂದು ಪ್ರಶಾಂತ್ .ಬಿ ಮನವಿ ಮಾಡಿಕೊಂಡಿದ್ದಾನೆ.


























